ಶೊಯೆಬ್ ಅಖ್ತರ್-ಆರ್ಚರ್-ಯುವಿ 
ಕ್ರಿಕೆಟ್

ನಗುತ್ತಿದ್ದ ಆರ್ಚರ್ ವಿರುದ್ಧ ಅಖ್ತರ್ ಕಿಡಿ, 'ರಾವಲ್ಪಿಂಡಿ ಎಕ್ಸ್‌ಪ್ರೆಸ್‌' ಕಾಲೆಳೆದ ಯುವರಾಜ್! 

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಗಾಯಗೊಂಡ ಸ್ಟೀವನ್ ಸ್ಮಿತ್ ಕುಸಿದು ಬಿದ್ದಿದ್ದು ಈ ವೇಳೆ ಸೌಜನ್ಯಕ್ಕೂ ಆರ್ಚರ್ ಮಾತಾಡಿಸಲಿಲ್ಲ ಎಂದು ಶೊಯೆಬ್ ಅಖ್ತರ್ ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್...

ಲಂಡನ್: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಗಾಯಗೊಂಡ ಸ್ಟೀವನ್ ಸ್ಮಿತ್ ಕುಸಿದು ಬಿದ್ದಿದ್ದು ಈ ವೇಳೆ ಸೌಜನ್ಯಕ್ಕೂ ಆರ್ಚರ್ ಮಾತಾಡಿಸಲಿಲ್ಲ ಎಂದು ಶೊಯೆಬ್ ಅಖ್ತರ್ ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್ ಅಖ್ತರ್ ಅವರೇ ನಿಮ್ಮ ಬೌಲಿಂಗ್ ನಲ್ಲಿ ಗಾಯಗೊಂಡ ಬ್ಯಾಟ್ಸ್ ಮನ್ ಬಳಿ ನೀವು ಏನು ಹೇಳುತ್ತಿದ್ದಿರೀ ಎಂದು ನನಗೆ ಗೊತ್ತು ಎಂದು ಕಾಲೆಳೆದಿದ್ದಾರೆ.

ಆರ್ಚರ್ ಬೌನ್ಸರ್ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಕುತ್ತಿಗೆಗೆ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಆರ್ಚರ್ ಸ್ಮಿತ್ ರನ್ನು ನೋಡಿ ನಗುತ್ತಾ ನಿಂತಿದ್ದರು ಎಂದು ಶೋಯೆಬ್ ಅಖ್ತರ್ ಕಿಡಿಕಾರಿದ್ದರು. 

ಶೋಯೆಬ್ ಟ್ವೀಟ್ ನಲ್ಲಿ ಕ್ರಿಕೆಟ್ ನಲ್ಲಿ ಬೌನ್ಸರ್ ಆಟದ ಒಂದು ಭಾಗ. ಆದರೆ ಒಬ್ಬ ಬೌಲರ್ ಎಸೆದ ಬೌನ್ಸರ್ ಬ್ಯಾಟ್ಸ್ ಮನ್ ತಲೆಗೆ ಅಪ್ಪಳಿಸಿ ಆತ ಕೆಳಗೆ ಬಿದ್ದರೆ, ಮೊದಲು ಬೌಲರ್ ಆತನ ಬಳಿ ಹೋಗಿ ವಿಚಾರಿಸಬೇಕು. ನಾನು ನನ್ನ ಸಮಯದಲ್ಲಿ ಅದನ್ನೇ ಮಾಡುತ್ತಿದ್ದೆ. ಆದರೆ ನಾನು ನೋಡಿದಂತೆ ಆರ್ಚರ್ ಸ್ಮಿತ್ ರಿಂದ ದೂರ ಹೋಗಿ ನಿಂತಿದ್ದರು ಎಂದು ಟ್ವೀಟಿಸಿದ್ದರು.

ಕೆಳಗೆ ಬಿದ್ದ ಬ್ಯಾಟ್ಸ್ ಮನ್ ಬಳಿ ಹೋಗಿ ವಿಚಾರಿಸುತ್ತಿದ್ದೆ ಎಂದು ಹೇಳಿರುವ ಶೊಯೆಬ್ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಯುವರಾಜ್, ಹೌದು ನೀವು ಬ್ಯಾಟ್ಸ್ ಮನ್ ಬಳಿ ಹೋಗಿ ಏನು ಹೇಳುತ್ತಿದ್ರಿ ಅಂತಾ ನನಗೆ ಗೊತ್ತು. ನಿಮಗೆ ಹೆಚ್ಚಿನದ್ದು ಏನು ಆಗಿಲ್ಲ ಅಂತ ನಾನು ಭಾವಿಸುತ್ತೇನೆ. ಇನ್ನು ಮುಂದೆ ಇದೇ ರೀತಿಯ ಬೌನ್ಸರ್ ಬಾಲ್ ಗಳು ಹೆಚ್ಚು ಬರುತ್ತವೆ ಹುಷಾರಾಗಿರೀ ಎಂದು ಹೇಳುತ್ತಿದ್ರಿ ಎಂದು ಯುವಿ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT