ಕ್ರಿಕೆಟ್

ಇಂಗ್ಲೆಂಡ್ ಕ್ರಿಕೆಟ್ ನ ಬೌಲಿಂಗ್ ದಂತಕಥೆ ಬಾಬ್ ವಿಲ್ಲೀಸ್ ನಿಧನ

Srinivasamurthy VN

ಲಂಡನ್: ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ ಗಳಲ್ಲಿ ಒಬ್ಬರಾದ ಬಾಬ್ ವಿಲ್ಲೀಸ್ (Bob Willis) ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಬಾಬ್ ವಿಲ್ಲೀಸ್ ನಿಧನಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ ಹೇಳಿಕೆ ಬಿಡುಗಡೆ ಮಾಡಿದ್ದು, ಸಾವಿನ ಸುದ್ದಿಯನ್ನು ಖಚಿತಪಡಿಸಿದೆ. ಕುಟುಂಬ ನೀಡಿರುವ ಹೇಳಿಕೆ ಪ್ರಕಾರ "ಬಾಬ್ ನಿಧನದಿಂದ ನಾವು ಕುಸಿದು ಬಿದ್ದಿದ್ದೇವೆ. ಅವರು ಅಸಾಧಾರಣ ಪತಿ, ತಂದೆ, ಸಹೋದರ ಮತ್ತು ಅಜ್ಜ. ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರ ಮೇಲೆ ಆಳವಾದ ಪ್ರಭಾವ ಬೀರಿದ್ದರು. ಯಾರೂ ಅವರಿಗೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ವಿಲ್ಲೀಸ್ ನಿಧನಕ್ಕೆ ಇಸಿಬಿ (ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ) ಕೂಡ ಕಂಬನಿ ಮಿಡಿದ್ದಿದ್ದು, 'ಬಾಬ್ ಸಾವಿನ ಸುದ್ದಿ ತುಂಬಾ ದುಃಖಕರವಾಗಿದೆ. ಅವರು ಇಂಗ್ಲಿಷ್ ಕ್ರಿಕೆಟ್‌ನ ದಂತಕಥೆಯಾಗಿದ್ದು ಇಂಗ್ಲಿಷ್ ಕ್ರಿಕೆಟ್ ತನ್ನ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ" ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಇಂಗ್ಲೆಂಡ್ ಪರ 90 ಟೆಸ್ಟ್ ಮತ್ತು 64 ಏಕದಿನ ಪಂದ್ಯಗಳನ್ನು ಆಡಿರುವ ಬಾಬ್ ವಿಲ್ಲೀಸ್ ಅವರನ್ನು 1981ರ ಆ್ಯಷಸ್ ಸರಣಿಯ ನಾಯಕ ಎಂದು ಸ್ಮರಿಸಲಾಗುತ್ತದೆ.  ಟೆಸ್ಟ್ ಕ್ರಿಕೆಟ್‌ನಲ್ಲಿ 325 ಮತ್ತು ಏಕದಿನ 80 ವಿಕೆಟ್‌ಗಳನ್ನು ಅವರು ಪಡೆದಿದ್ದಾರೆ. 

SCROLL FOR NEXT