T20 ವಿಶ್ವಕಪ್ 2026: ಶಿವಂ ದುಬೆ ಸ್ಫೋಟಕ ಅರ್ಧಶತಕ; ನೆದರ್ಲೆಂಡ್ ಗೆ ಗೆಲ್ಲಲು 194 ರನ್ ಗುರಿ ನೀಡಿದ ಭಾರತ

ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿದ್ದು, ನೆದರ್ಲೆಂಡ್ ಗೆ 194 ರನ್ ಗಳ ಸವಾಲಿನ ಗುರಿ ನೀಡಿದೆ.
Shivam Dube Hammers Stunning Batting
ಶಿವಂ ದುಬೆ ಸ್ಫೋಟಕ ಅರ್ಧಶತಕ
Updated on

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಶಿವಂ ದುಬೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 194 ರನ್ ಗಳ ಗುರಿ ನೀಡಿದೆ.

ಗುಜರಾತ್ ನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿದ್ದು, ನೆದರ್ಲೆಂಡ್ ಗೆ 194 ರನ್ ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಮೊದಲ ಓವರ್ ನಲ್ಲೇ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಡಕೌಟ್ ಆಗಿ ಮತ್ತೆ ನಿರಾಶೆ ಮೂಡಿಸಿದರು. ಈ ಸರಣಿಯಲ್ಲಿ ಇದು ಅವರ ಸತತ 3ನೇ ಡಕೌಟ್ ಆಗಿದೆ.

ಅಭಿಷೇಕ್ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ ಕೂಡ 18 ರನ್ ಗಳಿಸಿ ವಿಲಕ್ಷಣ ರೀತಿಯಲ್ಲಿ ಬೌಲ್ಡ್ ಆದರು. ಬಳಿಕ ತಿಲಕ್ ವರ್ಮಾ (31) ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ (34) ಜೋಡಿ ಮೂರನೇ ವಿಕೆಟ್ ಗೆ 30 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ ತಿಲಕ್ ವರ್ಮಾ ಲೋಗನ್ ವ್ಯಾನ್ ಬೀಕ್ ಬೌಲಿಂಗ್ ನಲ್ಲಿ ಔಟಾದರು.

Shivam Dube Hammers Stunning Batting
T20 World Cup 2026: ಸತತ 3ನೇ ಬಾರಿಗೆ ಡಕೌಟ್; ಕೋಚ್ ಗಂಭೀರ್ ಕಳಪೆ ದಾಖಲೆ ಸರಿಗಟ್ಟಿದ Abhishek Sharma!

ಬಳಿಕ ಸೂರ್ಯ ಜೊತೆಗೂಡಿದ ಶಿವಂದುಬೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರೂ ಬಳಿಕ ಲಯಕಂಡುಕೊಂಡು ಉತ್ತಮ ಬ್ಯಾಟಿಂಗ್ ಮಾಡಿದರು.ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 66 ರನ್ ಚಚ್ಚಿದರು.

ಮತ್ತೊಂದು ಬದಿಯಲ್ಲಿ ಹಾರ್ದಿಕ್ ಪಾಂಡ್ಯಾ ಕೂಡ 20 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 30 ರನ್ ಸಿಡಿಸಿ ಭಾರತದ ಸವಾಲಿನ ಮೊತ್ತಕ್ಕೆ ಕಾರಣರಾದರು.

ಪಾಂಡ್ಯಾ-ದುಬೆ ಅದ್ಭುತ ಜೊತೆಯಾಟ

ಇನ್ನು ಭಾರತ ಕೇವಲ 69 ರನ್ ಗಳಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್ ಗೆ ಬಂದ ನಾಯಕ ಸೂರ್ಯ 34 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅವರಿಗೆ 31 ರನ್ ಗಳಿಸುವ ಮೂಲಕ ತಿಲಕ್ ವರ್ಮಾ ಕೂಡ ಸಾಥ್ ನೀಡಿದರು. ಆದರೆ ಈ ಇಬ್ಬರೂ ಆಟಗಾರರು ಔಟಾದ ಬಳಿಕ ಭಾರತ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಗೂಡಿದ ಹಾರ್ದಿಕ್ ಪಾಂಡ್ಯಾ ಮತ್ತು ಶಿವಂ ದುಬೆ ಜೋಡಿ ಕೇವಲ 35 ಎಸೆತಗಳಲ್ಲಿ 76 ರನ್ ಜೊತೆಯಾಟವಾಡಿ ಭಾರತದ ಮೊತ್ತ 190ರ ಗಡಿ ದಾಟುವಂತೆ ಮಾಡಿದರು.

ನೆದರ್ಲೆಂಡ್ ಆರಂಭಿಕ ಭರ್ಜರಿ ಬೌಲಿಂಗ್

ಅಂತೆಯೇ ಈ ಪಂದ್ಯದ ಆರಂಭದಲ್ಲಿ ನೆದರ್ಲೆಂಡ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತು. ಭಾರತ ಆರಂಭಿಕರಿಬ್ಬರನ್ನೂ ಬೇಗನೇ ಔಟ್ ಮಾಡಿದ ನೆದರ್ಲೆಂಡ್ ಸೂರ್ಯ ಕುಮಾರ್ ಯಾದವ್ ಪಡೆ ಮೇಲೆ ಭಾರಿ ಒತ್ತಡ ಹೇರಿತು. ನೆದರ್ಲೆಂಡ್ ಪರ ಲೋಗನ್ ವ್ಯಾನ್ ಬೀಕ್ 3 ವಿಕೆಟ್ ಕಬಳಿಸಿದರೆ, ಆರ್ಯನ್ ದತ್ 2 ವಿಕೆಟ್ ಗಳಿಸಿದ್ದು ಮಾತ್ರವಲ್ಲದೇ ತಮ್ಮ 4 ಓವರ್ ನಲ್ಲಿ ಕೇವಲ 19 ರನ್ ನೀಡಿ ಉತ್ತಮ ಬೌಲಿಂಗ್ ಮಾಡಿದರು. ಉಳಿದಂತೆ ಕೈಲ್ ಕ್ಲೇನ್ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com