ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ಪಂತ್! 
ಕ್ರಿಕೆಟ್

ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ಪಂತ್!

ಟೀಮ್‌ ಇಂಡಿಯಾ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಇದೇ ಭಾನುವಾರ ಆರಂಭವಾಗುವ ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವಿನ  ಟಿ-20 ಸರಣಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ಹೈದರಾಬಾದ್‌: ಟೀಮ್‌ ಇಂಡಿಯಾ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಇದೇ ಭಾನುವಾರ ಆರಂಭವಾಗುವ ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವಿನ  ಟಿ-20 ಸರಣಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವೆ ಟಿ-20 ಕ್ರಿಕೆಟ್‌ ನಲ್ಲಿ ವಿಕೆಟ್ ಹಿಂದೆ ಹೆಚ್ಚು ವಿಕೆಟ್‌ ಪಡೆದು ಮುಂಚೂಣಿಯಲ್ಲಿರುವ ಧೋನಿ ಅವರ ದಾಖಲೆ ಮುರಿಯಲು ಪಂತ್‌ಗೆ ಇನ್ನು ಎರಡು ವಿಕೆಟ್‌ ಅಗತ್ಯವಿದೆ. ಪಂತ್‌ ವಿಂಡೀಸ್‌ ವಿರುದ್ಧ ಏಳು ಪಂದ್ಯಗಳಿಂದ ವಿಕೆಟ್ ಹಿಂದೆ ಮೂರು ಬಲಿ ತೆಗೆದುಕೊಂಡಿದ್ದಾರೆ. ಆದರೆ, ಧೋನಿ ಆಡಿರುವ ಏಳು ಪಂದ್ಯಗಳಿಂದ ಐದು ಬಲಿ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್‌ ವಿರುದ್ಧ ಭಾರತ ಮೂರು ಟಿ-20 ಪಂದ್ಯಗಳಾಡಲಿದ್ದು, ಪಂತ್‌ಗೆ ಧೋನಿ ದಾಖಲೆ ಮುರಿಯಲು ಅತ್ಯುತ್ತಮ ಅವಕಾಶವಿದೆ. ಈ ಪಟ್ಟಿಯಲ್ಲಿ ಮಾಜಿ ವಿಂಡೀಸ್‌ ವಿಕೆಟ್‌ ಕೀಪರ್ ದಿನೇಶ್ ರಾಮ್‌ದಿನ್ ಐದು ಬಲಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಆ್ಯಂಡ್ರೆ ಫ್ಲೆಚರ್ (4) ಮೂರನೇ ಸ್ಥಾನ ಹಾಗೂ ದಿನೇಶ್ ಕಾರ್ತಿಕ್ (3) ನಾಲ್ಕನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

1984ರ ಸಿಖ್ ವಿರೋಧಿ ದಂಗೆ ಪ್ರಕರಣ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಜೈಲಿನಲ್ಲೇ ನಿಧನ!

ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಶಾ ಎದುರೇ ಗುಡುಗಿದ ಡಿಕೆಶಿ: 'ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ಬೇಡ'; ಲೋಕಸಭೆ ಸ್ಥಾನ 543ಕ್ಕೇ ಸೀಮಿತಗೊಳಿಸುವಂತೆ ಆಗ್ರಹ!

ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು: ಚಾಮರಾಜನಗರ ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯವೇ ಬಲಿ!

ದಾವಣಗೆರೆ: ಇಬ್ಬರು ಮಕ್ಕಳ ಸಹಿತ ದಂಪತಿ ಅನುಮಾನಾಸ್ಪದವಾಗಿ ನಾಪತ್ತೆ; ಮನೆಯಲ್ಲಿ ಪತ್ರ ಪತ್ತೆ!

2013ರ ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ Tehelka ಮಾಜಿ ಸಂಪಾದಕ ತರುಣ್ ತೇಜಪಾಲ್