ಸಂಗ್ರಹ ಚಿತ್ರ 
ಕ್ರಿಕೆಟ್

ಬೌಲಿಂಗ್‌ ಮಾಡುವಾಗ ಗೊಂದಲಕ್ಕೆ ಒಳಗಾಗಿದ್ದೆ: ಕುಲ್ದೀಪ್‌ ಯಾದವ್

ವೆಸ್ಟ್ ಇಂಡೀಸ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ್ದ ಭಾರತ ತಂಡದ ಸ್ಪಿನ್ನರ್‌ ಕುಲ್ದೀಪ್ ಯಾದವ್‌ ಅವರು ಯಾವ ಎಸೆತ ಮಾಡಬೇಕೆಂಬಂತೆ ಗೊಂದಲಕ್ಕೆ ಒಳಗಾಗಿದ್ದೆ ಎಂದು ತಿಳಿಸಿದ್ದಾರೆ.

ವಿಶಾಖಪಟ್ಟಣಂ: ವೆಸ್ಟ್ ಇಂಡೀಸ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ್ದ ಭಾರತ ತಂಡದ ಸ್ಪಿನ್ನರ್‌ ಕುಲ್ದೀಪ್ ಯಾದವ್‌ ಅವರು ಯಾವ ಎಸೆತ ಮಾಡಬೇಕೆಂಬಂತೆ ಗೊಂದಲಕ್ಕೆ ಒಳಗಾಗಿದ್ದೆ ಎಂದು ತಿಳಿಸಿದ್ದಾರೆ.

ಇಲ್ಲಿನ , ಡಾ. ವೈ ರಾಜಶೇಖರರೆಡ್ಡಿ ಕ್ರೀಡಾಂಗಣದಲ್ಲಿ ಬುಧವಾರ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 388 ರನ್‌ ಕಠಿಣ ಗುರಿಯನ್ನು ವೆಸ್ಟ್ ಇಂಡೀಸ್‌ ತಂಡಕ್ಕೆ ನೀಡಿತ್ತು. ಗುರಿ ಹಿಂಬಾಲಿಸಿದ್ದ ಪ್ರವಾಸಿಗರು 107 ರನ್‌ ಗಳಿಂದ ಸೋಲು ಒಪ್ಪಿಕೊಂಡಿದ್ದರು. ಇದರೊಂದಿಗೆ ಸರಣಿ 1-1 ಸಮಬಲವಾಗಿದೆ. ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್‌ ತನ್ನ ಎಂಟನೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಶಾಯ್ ಹೋಪ್(78 ರನ್‌), ಜೇಸನ್ ಹೋಲ್ಡರ್‌ (11) ಹಾಗೂ ಅಲ್ಜಾರಿ ಜೋಸೆಫ್‌ (0) ಅವರ ವಿಕೆಟ್‌ ಗಳನ್ನು ಕಬಳಿಸಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಬಾರಿ ಹ್ಯಾಟ್ರಿಕ್‌ ವಿಕೆಟ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೆ ಭಾಜನರಾದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ತಪ್ಪು ಎಸೆತ ಅಥವಾ ಚೈನಾಮನ್‌ ಎಸೆತಗಳಲ್ಲಿ ಯಾವ ಎಸೆತ ಹಾಕಬೇಕು ಎಂಬಂತೆ ಪಂದ್ಯದಲ್ಲಿ ಗೊಂದಲ ಉಂಟಾಗಿತ್ತು. ಎರಡನೇ ಸ್ಲಿಪ್‌ ಇಟ್ಟುಕೊಂಡು ತಪ್ಪು ಎಸೆತ ಹಾಕುವುದನ್ನು ಆಯ್ದುಕೊಂಡೆ. ಆಫ್‌ ಮಿಡೆಲ್‌ ಲೈನ್‌ನಲ್ಲಿ ಬೌಲ್ ಮಾಡಲು ಯೋಚಿಸಿದೆ. ಏಕೆಂದರೆ, ಬ್ಯಾಟ್ಸ್‌ಮನ್‌ ಚೆಂಡನ್ನು ಮುಟ್ಟದೇ ಇದ್ದರೂ ಚೆಂಡು ವಿಕೆಟ್‌ಗೆ ಬಡಿಯಲಿದೆ. ಇದು ನನ್ನ ಯೋಜನೆಯಾಗಿತ್ತು," ಎಂದು ಹೇಳಿದರು. "ಕಳೆದ 10 ತಿಂಗಳುಗಳು ನನ್ನ ಪಾಲಿಗೆ ಕಠಿಣವಾಗಿತ್ತು. ಬೌಲಿಂಗ್‌ನಲ್ಲಿ ಸ್ವಲ್ಪ ವೇಗ ಹೆಚ್ಚು ಮಾಡಿದ್ದರಿಂದ ವಿಕೆಟ್‌ ಗಳು ಸಿಗುತ್ತಿರಲಿಲ್ಲ. ಈ ವೇಳೆ ಬೌಲಿಂಗ್‌ ಬಗ್ಗೆ ಸಾಕಷ್ಟು ಚಿಂತೆ ಮಾಡಿದ್ದೆ. ವಿಶ್ವಕಪ್‌ ಬಳಿಕ ನಾನು ತಂಡದಿಂದ ಹೊರಗುಳಿಯಬೇಕಾಯಿತು. ನಾಲ್ಕು ತಿಂಗಳುಗಳ ಕಾಲ ಕಠಿಣ ಪರಿಶ್ರಮ ಪಡಬೇಕಾಯಿತು." ಎಂದು ತಿಳಿಸಿದರು.

"ಬೌಲಿಂಗ್‌ನಲ್ಲಿನ ನನ್ನ ವ್ಯತ್ಯಾಸ, ವೇಗ ಮತ್ತು ನಿಖರತೆಯ ಮೇಲೆ ನಾನು ಕೆಲಸ ಮಾಡಿದ್ದೇನೆ, ಅದಕ್ಕಾಗಿಯೇ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ನಾನು ಬೌಲ್ ಮಾಡಿದ ವೇಗವು ಅದ್ಭುತವಾಗಿತ್ತು. ವೇಗವನ್ನು ಪಿಚ್‌ಗೆ ತಕ್ಕಂತೆ ವ್ಯತ್ಯಾಸ ಮಾಡಬೇಕಾಗುತ್ತದೆ. ವಿಶೇಷವಾಗಿ ಭಾರತದ ಪಿಚ್‌ಗಳು ನಿಧಾನಗತಿಯಿಂದ ಕೂಡಿರುತ್ತವೆ. ಹಾಗಾಗಿ, ವೇಗ ಮತ್ತು ವ್ಯತ್ಯಾಸಗಳನ್ನು ಮಿಶ್ರಣ ಮಾಡಬೇಕು. ಕೆಲವು ವೇಳೆ ವೇಗ ಮತ್ತು ಕೆಲವು ವೇಳೆ ನಿಧಾನಗತಿಗೆ ಮೊರೆ ಹೋಗಬೇಕು. ಬೌಲಿಂಗ್ ಕೋಚ್‌ ಭರತ್‌ ಅರುಣ್ ಸಾರ್‌ ಹಾಗೂ ಮುಖ್ಯ ಕೋಚ್‌ ರವಿಶಾಸ್ತ್ರಿ ಅವರೊಂದಿಗೆ ಸಲಹೆ ಪಡೆದಿದ್ದೇನೆ," ಎಂದರು.

ಚೆನ್ನೈ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿ," ಮೊದಲ ಏಕದಿನ ಪಂದ್ಯದಲ್ಲಿ ಚೆನ್ನಾಗಿ ನಾವು ಬೌಲಿಂಗ್‌ ಮಾಡಿದ್ದೆವು. ಆ ವೇಳೆ ನಾವು ಬ್ಯಾಟ್ಸ್‌ಮನ್‌ಗಳಿಗೆ ಕ್ರೆಡಿಟ್‌ ನೀಡಬೇಕು. ಶಿಮ್ರಾನ್ ಹೆಟ್ಮೇಯರ್‌ ಮತ್ತು ಶಾಯ್ ಹೋಪ್‌ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ನಮ್ಮನ್ನು ಅವರು ಅತ್ಯುತ್ತಮವಾಗಿ ಎದುರಿಸಿದ್ದರು. ಆದರೂ, ಇನ್ನಷ್ಟು ಸುಧಾರಣ ನಮಗೆ ಅಗತ್ಯವಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಯಶಸ್ವಿಯಾದೆವು," ಎಂದು ಕುಲ್ದೀಪ್ ಯಾದವ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT