ಕ್ರಿಕೆಟ್

ಐಪಿಎಲ್ ಹರಾಜು : ಪ್ಯಾಟ್ ಕಮ್ಮಿನ್ಸ್ ದುಬಾರಿ ಆಟಗಾರ 15. 5 ಕೋಟಿಗೆ ಮಾರಾಟ, ಬಿಕರಿಯಾಗದ ಪೂಜಾರ, ವಿಹಾರಿ

Nagaraja AB

ಕೊಲ್ಕತ್ತಾ:  ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆಟಗಾರ ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದೇಶಿ  ಆಟಗಾರರೊಬ್ಬರನ್ನು ಭಾರಿ ಮೊತ್ತಕ್ಕೆ ಖರೀದಿಸಲಾಗಿದೆ.  

ಆಸ್ಟ್ರೇಲಿಯಾ ತಂಡದ ಉಪ ನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಗೆ 15. 5 ಕೋಟಿ ನೀಡಿ ಕೊಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. 

ಖರೀದಿದಾರರು ವಿದೇಶಿ ಆಟಗಾರರತ್ತ ಚಿತ್ತ ಹರಿಸಿರುವುದರಿಂದ  ಭಾರತೀಯ ಆಟಗಾರರಾದ ಚೇತೇಶ್ವರ ಪೂಜಾರ ಹಾಗೂ ಹನುಮ ವಿಹಾರಿ ಇನ್ನೂ ಮಾರಾಟವಾಗಿಲ್ಲ. 50 ಲಕ್ಷ ಮುಖ ಬೆಲೆಯ ಭಾರತೀಯ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಕೂಡಾ ಇನ್ನೂ ಮಾರಾಟವಾಗಿಲ್ಲ. 

ಇಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿ ಅತಿ ಹೆಚ್ಚು 42. 7 ಕೋಟಿ ರೂ. ವೆಚ್ಚ ಮಾಡಿದ್ದರೆ. ಮುಂಬೈ 13. 05 ಕೋಟಿ  ವೆಚ್ಚ ಮಾಡಿದೆ. 

SCROLL FOR NEXT