ಕ್ರಿಕೆಟ್

ಇದೇನು ಗಲ್ಲಿ ಕ್ರಿಕೆಟಾ? ಕೆಎಲ್ ರಾಹುಲ್ ವಿರುದ್ಧ ಪೊಲಾರ್ಡ್ ಗರಂ, ವಿಡಿಯೋ ವೈರಲ್!

Vishwanath S

ಕಟಕ್: ಟೀಂ ಇಂಡಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ವರ್ತನೆಗೆ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಗರಂ ಆಗಿದ್ದಾರೆ. 

ಕಟಕ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕುರಿತು ಪೊಲಾರ್ಡ್ ಆಕ್ರೋಶಗೊಂಡಿದ್ದರು. ಕಾರಣ ಕೀಮ್ ಪೌಲ್ ಬೌಲಿಂಗ್ ನಲ್ಲಿ ಕೆಎಲ್ ರಾಹುಲ್ ಕೊನೆಯ ಕ್ಷಣದಲ್ಲಿ ಬ್ಯಾಟ್ ಬೀಸಿ ಹಿಂದಕ್ಕೆ ಸರಿದರು. 

ಇದನ್ನು ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಿದ್ದು ಅದಕ್ಕೆ ಪೊಲಾರ್ಡ್ ಅವರು ರಾಹುಲ್ ಬ್ಯಾಟ್ ಬೀಸಿದ್ದರು. ಅದು ಹೇಗೆ ಡೆಡ್ ಬಾಲ್ ಆಗುತ್ತದೆ ಎಂದು ಅಂಪೈರ್ ಅವರನ್ನು ಕೇಳಿದರು. ಕೊನೆಗೆ ಪೊಲಾರ್ಡ್ ಸುಮ್ಮನಾಗಿ ಹಿಂತಿರುಗಿದರು. 

ಇದೀಗ ಈ ವಿಚಾರ ನೆಟಿಗರ ಟ್ರೋಲ್ ಗೆ ಗುರಿಯಾಗಿದೆ. ಅಲ್ಲದೆ ಕೆಎಲ್ ರಾಹುಲ್ ಪರ-ವಿರೋಧ ಟೀಕೆಗಳು ವ್ಯಕ್ತವಾಗುತ್ತಿದೆ. 

SCROLL FOR NEXT