ಕ್ರಿಕೆಟ್

ಶ್ರೀಲಂಕಾ ಟಿ20 .ಆಸ್ಟ್ರೇಲಿಯಾ ಏಕದಿನಕ್ಕೆ ಟೀಂ ಇಂಡಿಯಾ ಪ್ರಕಟ: ಬುಮ್ರಾ ಕಂ ಬ್ಯಾಕ್, ರೋಹಿತ್ ಗೆ ರೆಸ್ಟ್

Raghavendra Adiga

ನವದೆಹಲಿ: 2020 ರ ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ 20 ಐ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಭಾರತದ ತಂಡಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.

ಜನವರಿ 5 ಮತ್ತು 10 ರ ನಡುವಿನ 3 ಟಿ 20 ಪಂದ್ಯಗಳಲ್ಲಿ ಭಾರತ ಶ್ರೀಲಂಕಾ ವಿರುದ್ಧ ಸೆಣಸಲಿದ್ದು, ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಜನವರಿ 14 ಮತ್ತು 19 ರ ನಡುವೆ ನಡೆಯಲಿದೆ.

ಶ್ರೀಲಂಕಾ ವಿರುದ್ಧ ಟಿ20  ಸರಣಿಗೆ ಉಪನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.ಜತೆಗೆ ಟೀಂ ಇಂಡಿಯಾ ನೆಚ್ಚಿನ ಬೌಲರ್ ಮೊಹಮ್ಮದ್ ಶಮಿ  ಅವರಿಗೆ ಸಹ ಈ ಸರಣಿಯಂದ ಬಿಡುವು ನೀಡಲಾಗಿದೆ. ಆದರೆ ಈ ಇಬ್ಬರೂ ಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಆಡಲಿದ್ದಾರೆ.

ಜೊಸ ವರ್ಷದ ಮೊದಲ ಸರಣಿಯಲ್ಲಿ ಟೀಂ ಇಂಡಿಯಾವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ.

ಏತನ್ಮಧ್ಯೆ ವೇಗಿ ಜಸ್ಪ್ರಿತ್ ಬುಮ್ರಾ ಶ್ರೀಲಂಕಾ, ಆಸ್ಟ್ರೇಲಿಯಾ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.  ಬೆನ್ನು ನೋವಿನ ಸಮಸ್ಯೆಯಿಂದ ಅಂತರ್ಷ್ಟ್ರೀಯ ಪಂದ್ಯಗಳಿಂದ ದೂರವಾಗಿದ್ದ ಬುಮ್ರಾಮತ್ತೆ ತಂಡಕ್ಕೆ ಮರಳಿರುವುದು ಭಾರತಕ್ಕೆ ಪ್ಲಸ್ ಆಗಿದೆ. ಈ ಮಧ್ಯೆ ಬೆನ್ನು ನೋವಿಂದ ಬಳಲುತ್ತಿರುವ ಇನ್ನೋರ್ವ ಆಟಗಾರ  ದೀಪಕ್‌ ಚಹರ್‌ ಮುಂದಿನ ಐಪಿಎಲ್ ಸರಣಿಯವರೆಗೂ ಅಲಭ್ಯರಾಗಲಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20ಸರಣಿಗೆ ಟೀಂ ಟೀಂ ಇಂಡಿಯಾ ಪಡೆ ಹೀಗಿದೆ-
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಶಿವಂ ದುಬೇ, ಯಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ನವದೀಪ್‌ ಸೈನಿ, ಶಾರ್ದುಲ್‌ ಠಾಕೂರ್‌, ಮನೀಶ್‌ ಪಾಂಡೆ, ವಾಷಿಂಗ್ಟನ್‌ ಸುಂದರ್‌, ಸಂಜು ಸ್ಯಾಮ್ಸನ್‌.

ಆಸ್ಟ್ರೇಲಿಯಾ ವಿರುದ್ಧ ಏಕದಿನಕ್ಕಾಗಿ ಭಾರತ ತಂಡದ ವಿವರ ಇಂತಿದೆ
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ಕೇದಾರ್‌ ಜಾಧವ್‌, ಶಿವಂ ದುಬೇ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ನವದೀಪ್‌ ಸೈನಿ, ಶಾರ್ದುಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ.
 

SCROLL FOR NEXT