ಬಾರ್ಬಡೋಸ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ವಿಂಡೀಸ್ ಯುವ ವೇಗಿ ಅಲ್ಜಾರಿ ಜೋಸೆಫ್ ತನ್ನ ಹೆತ್ತ ತಾಯಿಯ ಸಾವಿನ ಸುದ್ದಿ ಕೇಳಿಯೂ ಆಟದಲ್ಲಿ ಭಾಗಿಯಾಗಿದ್ದು ಈ ಪಂದ್ಯವನ್ನು ಗೆಲ್ಲುವ ಮೂಲಕ ವೆಸ್ಟ್ ಇಂಡೀಸ್ ಐತಿಹಾಸಿಕ ಗೆಲುವು ಸಾಧಿಸಿದೆ.
ಜೋಸೆಫ್ ಅವರ ತಾಯಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಇನ್ನು ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಅವರು ಸಾವನ್ನಪ್ಪಿದ್ದು ಈ ಸುದ್ದಿ ಕೇಳಿಯೂ ಜೋಸೆಫ್ ಆಟ ಮುಂದುವರೆಸಿದ್ದರು. ಇನ್ನು 5 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಗಿದ್ದರು.
ಸರಣಿ ಗೆಲುವನ್ನು ತಂಡದ ನಾಯಕ ಜೇಸನ್ ಹೋಲ್ಡರ್ ಜೋಸೆಫ್ ಅವರ ತಾಯಿಗೆ ಸಮರ್ಪಿಸಿದರು. ಇನ್ನು ಜೋಸೆಫ್ ಅವರು ತಾಯಿ ಮರಣ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದರು. ಅವರ ಸಂದರ್ಭವನ್ನು ನಾವು ವಿವರಿಸಲು ಅಸಾಧ್ಯವಾಗಿತ್ತು. ಆದರೆ ಅವರು ಆ ಸಂದರ್ಭದಲ್ಲೂ ಮೈದಾನಕ್ಕಿಳಿದಿದ್ದು ನಮಗೆ ಸ್ಪೂರ್ತಿ ನೀಡಿತ್ತು. ಅಲ್ಲದೆ ಈ ನಿರ್ಧಾರ ನಮಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಕಾರಣವಾಯಿತು ಎಂದರು.
22 ವರ್ಷದ ಜೋಸೆಫ್ ಅವರಿಗೆ ಆಟದ ನಡುವೆ ತೆರಳಲು ಅವಕಾಶ ನೀಡಲಾಗಿತ್ತು. ಆದರೆ ತಂಡದ ಗೆಲುವಿನ ಉದ್ದೇಶದಿಂದ ಜೋಸೆಫ್ ಭಾಗವಹಿಸುವುದು ಮುಖ್ಯವಾಗಿತ್ತು. ಆದ್ದರಿಂದ ಅವರು ಮನೆಗೆ ತೆರಳದೇ ಇರುವ ನಿರ್ಧಾರವನ್ನು ಕೈಗೊಂಡಿದ್ದರು.