ಕ್ರಿಕೆಟ್

ಭೀಕರ ವಿಡಿಯೋ: ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಟೀಂ ಇಂಡಿಯಾ ವೇಗಿ!

Vishwanath S
ಕೋಲ್ಕತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಬಾರಿಸಿದ ಚೆಂಡು ತಲೆಗೆ ಬಿದ್ದ ಪರಿಣಾಮ ಟೀಂ ಇಂಡಿಯಾದ ವೇಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ. 
ಟೀಂ ಇಂಡಿಯಾದ ವೇಗಿ ಅಶೋಕ್ ದಿಂಡಾ ಬೌಲಿಂಗ್ ಮಾಡುತ್ತಿದ್ದ ವೇಳೆ ಬ್ಯಾಟ್ಸ್ ಮನ್ ಬಾರಿಸಿದ ಚೆಂಡು ನೇರವಾಗಿ ದಿಂಡಾ ತಲೆಗೆ ಬಿದ್ದಿದ್ದು ಕೂಡಲೇ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳಕ್ಕೆ ವೈದ್ಯರ ತಂಡ ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ತದನಂತರ ಸಿಟಿ ಸ್ಕ್ಯಾನ್ ಮಾಡಿದ್ದು ದಿಂಡಾಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ನಂತರ ಮೈದಾನಕ್ಕೆ ಬಂದ ದಿಂಡಾ ಮತ್ತೇ ಬೌಲಿಂಗ್ ಮಾಡಿದರು.
ಮುಸ್ತಾಕ್ ಅಲಿ ಚಾಂಪಿಯನ್ಸ್ ಟಿ20 ಟೂರ್ನಿಗಾಗಿ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಬೆಂಗಾಳ ತಂಡ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ.
SCROLL FOR NEXT