ಕ್ರಿಕೆಟ್

ವಿಶ್ವಕಪ್: ಇಂಡೋ-ಪಾಕ್ ಪಂದ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ- ಸಿಒಎ

Nagaraja AB

ಮುಂಬೈ: ಪುಲ್ವಾಮಾ ಉಗ್ರರ ದಾಳಿ ನಂತರ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16 ರಂದು ನಿಗದಿಯಾಗಿರುವ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಬಹಿಷ್ಕರಿಸುವಂತೆ ವ್ಯಾಪಕ ಜನಾಗ್ರಹ ಕೇಳಿಬರುತ್ತಿದೆ.

ಪಾಕಿಸ್ತಾನ ವಿರುದ್ಧದ ವಿಶ್ವಕಪ್  ಪಂದ್ಯದ ಯಾವುದೇ ನಿಲುವು ತೆಗೆದುಕೊಳ್ಳದಿರಲು  ಭಾರತೀಯ ಕ್ರಿಕೆಟ್ ಮಂಡಳಿಯ ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ, ಉಗ್ರರೊಂದಿಗೆ ನಂಟು ಹೊಂದಿರುವ ಯಾವುದೇ ರಾಷ್ಟ್ರದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಐಸಿಸಿ ಸದಸ್ಯರನ್ನು ಆಗ್ರಹಿಸಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದ ಬಹಿಷ್ಕಾರ ಎದಿದ್ದ ಊಹಾಪೋಹಗಳ ಬಗ್ಗೆ ಇಂದು ನಡೆದ ಆಡಳಿತ ಮಂಡಳಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತಾದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಸಭೆಯ ನಂತರ ಆಡಳಿತಗಾರರ ಸಮಿತಿ ಅಧ್ಯಕ್ಷ ವಿನೋದ್ ರಾಯ್ ಹಾಗೂ ಸದಸ್ಯ ಡಯಾನಾ ಎಡುಲ್ಜಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭ ಇರುವುದಿಲ್ಲ, ಆ ಹಣವನ್ನು  ಪುಲ್ವಾಮಾ ಎನ್ ಕೌಂಟರ್ ನಲ್ಲಿ ಹುತಾತ್ಮ ಯೋಧರ ಕುಟುಂಬಗಲಿಗೆ ನೀಡಲಾಗುವುದು, ಐಸಿಸಿ ವಿಶ್ವಕಪ್ ವೇಳೆಯಲ್ಲಿ ಆಟಗಾರರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಬಿಸಿಸಿಐ ಕೇಳಿಕೊಂಡಿದೆ.
ಉಗ್ರರೊಂದಿಗೆ ಸಂಪರ್ಕ ಹೊಂದಿರುವ ರಾಷ್ಟ್ರಗಳೊಂದಿಗೆ ಮುಂದಿನ ದಿನಗಳಲ್ಲಿ ಕ್ರಿಕೆಟ್  ಪಂದ್ಯ ನಡೆಸದಂತೆ  ಬಿಸಿಸಿಐ ಇ-ಮೇಲ್ ಮೂಲಕ ಐಸಿಸಿ ಕೇಳಿಕೊಂಡಿದೆ ಎಂದು ಅವರು ತಿಳಿಸಿದರು.
SCROLL FOR NEXT