ಕ್ರಿಕೆಟ್

ಮುಂದಿನ ಜನ್ಮದಲ್ಲೂ ಟೆಸ್ಟ್ ಕ್ರಿಕೆಟ್ ಆಡುವುದನ್ನೇ ಬಯಸುತ್ತೇನೆ: ಚೇತೇಶ್ವರ್ ಪೂಜಾರ

Nagaraja AB

ಮುಂಬೈ: ಯಾವುದೇ ಕ್ರಿಕೆಟ್ ಆಟಗಾರರಿಗೆ ಟೆಸ್ಟ್ ಪಂದ್ಯ ಸವಾಲಿನಿಂದ ಕೂಡಿರುತ್ತದೆ. ಆದರೆ, ಮುಂದಿನ ಜೀವನದಲ್ಲೂ ಅವಕಾಶ ದೊರೆತರೆ  ಟೆಸ್ಟ್  ಕ್ರಿಕೆಟ್ ಆಡುವುದನ್ನೇ ಪ್ರೀತಿಸುತ್ತೇನೆ ಎಂದು ಟೀಂ ಇಂಡಿಯಾ ಆಟಗಾರ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಟಿ-20 ಮಾದರಿಯಲ್ಲಿ ಆಟಗಾರರನ್ನು ತಾತ್ಕಾಲಿಕವಾಗಿ ವರ್ಣಿಸಲಾಗುತ್ತದೆ. ಆದರೆ. ಟೆಸ್ಟ್ ಕ್ರಿಕೆಟ್ ಸವಾಲಿನಿಂದ ಕೂಡಿರುತ್ತದೆ.  ಒಂದು ವೇಳೆ ಇದೇ ರೀತಿಯ ಟೆಸ್ಟ್  ಪಂದ್ಯ ನಡೆಯುತ್ತಾ, ತಾವು ಅವಕಾಶ ಪಡೆದರೆ , ಟೆಸ್ಟ್ ಕ್ರಿಕೆಟ್ ಆಡುತ್ತಾನೆ ಇರಲು ಇಷ್ಟಪಡುತ್ತೇನೆ ಎಂದು  ಬಿಸಿಸಿಐ ವಿಡಿಯೋದಲ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್  ಪಂದ್ಯದಲ್ಲಿ  246 ಎಸೆತಗಳಲ್ಲಿ 123 ರನ್ ಗಳಿಸುವ ಮೂಲಕ ಭಾರತ ಗೆಲ್ಲಲು ನೆರವಾಗಿದ್ದ ಚೇತೇಶ್ವರ್ ಪೂಜಾರ, ಇದು ತಮ್ಮ ಜೀವನದಲ್ಲಿ ಅತಿ ಮಹತ್ವದ ಪಂದ್ಯ ಎಂದು ಹೇಳಿದ್ದಾರೆ.

ಪರ್ಥ್ ಟೆಸ್ಟ್ ನಲ್ಲಿ ಆಡದಿದ್ದರೂ  ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಕಮ್ ಬ್ಯಾಕ್ ಆದ ಚೇತೇಶ್ವರ್  319 ಎಸೆತಗಳಲ್ಲಿ 106 ರನ್ ಗಳಿಸಿದ್ದರು. ಈಗ ನಡೆಯುತ್ತಿರುವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 373 ಎಸೆತಗಳಲ್ಲಿ 193 ರನ್ ಗಳಿಸಿದ್ದಾರೆ.

ರಕ್ಷಣೆಯೇ ತಮ್ಮ ಸಾಮರ್ಥ್ಯ ಆಗಿದೆ ಎನ್ನುವ ಚೇತೇಶ್ವರ್ ಪೂಜಾರ್,  ಬ್ಯಾಟ್ಸ್ ಮನ್ ಆಗಿ ಕೆಟ್ಟದಾಗಿ ಯೋಚಿಸುವುದಿಲ್ಲ. ಆದರೆ, ಪೀಲ್ಡಿಂಗ್ ಮಾಡುವಾಗ ಟೀಂ ಇಂಜಿಯಾ ಬೌಲರ್ ಗಳ ಬಗ್ಗೆ ಯೋಚಿಸುವುದಾಗಿ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

SCROLL FOR NEXT