ಮ್ಯಾಚ್ ಫಿಕ್ಸಿಂಗ್ ಹಗರಣ: ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರಿಗೆ ಬ್ರಿಟನ್ ಕೋರ್ಟ್ ಆದೇಶ 
ಕ್ರಿಕೆಟ್

ಮ್ಯಾಚ್ ಫಿಕ್ಸಿಂಗ್ ಹಗರಣ: ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರಿಗೆ ಬ್ರಿಟನ್ ಕೋರ್ಟ್ ಆದೇಶ

2000 ರಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೊನಿಯೆ ಜೊತೆಗೂಡಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದ ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರಿಗೆ ಬ್ರಿಟನ್ ಕೋರ್ಟ್ ಜ.07 ರಂದು ಆದೇಶ ನೀಡಿದೆ.

ಲಂಡನ್: 2000 ರಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೊನಿಯೆ ಜೊತೆಗೂಡಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದ ಬುಕ್ಕಿ ಸಂಜೀವ್ ಚಾವ್ಲಾ ಗಡಿಪಾರಿಗೆ ಬ್ರಿಟನ್ ಕೋರ್ಟ್ ಜ.07 ರಂದು ಆದೇಶ ನೀಡಿದೆ. 
ಬ್ರಿಟನ್ ಕೋರ್ಟ್ ಆದೇಶದಿಂದ ಭಾರತದ ದೀರ್ಘಾವಧಿಯ ಶ್ರಮಕ್ಕೆ ಫಲ ದೊರೆತಿದೆ.  "ಲಂಡನ್ ನಲ್ಲಿರುವ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಜೀವ್ ಚಾವ್ಲಾನನ್ನು ಭಾರತಕ್ಕೆ ಗಡಿಪಾರು ಮಾಡಲು ಆದೇಶ ನೀಡಿದ್ದು ಈ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ".  ಎಂದು ಭಾರತದ ಪರವಾಗಿ ವಾದ ಮಂಡಿಸಿದ್ದ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ ನ ವಕ್ತಾರರು ತಿಳಿಸಿದ್ದಾರೆ. 
ಈಗ ಗಡಿಪಾರಿನ ಅಧಿಕೃತ ಆದೇಶಕ್ಕಾಗಿ ಈ ಪ್ರಕರಣ ಗೃಹ ಕಾರ್ಯದರ್ಶಿ ಸಜೀದ್ ಜಾವೇದ್ ಬಳಿಗೆ ಹೋಗಲಿದೆ. ಗಡಿಪಾರು ಮಾಡಬೇಕೆಂದು ಗೃಹ ಕಾರ್ಯದರ್ಶಿಗಳು ಬಯಸಿದರೆ ಇನ್ನೆರಡು ತಿಂಗಳಲ್ಲಿ ಸಂಜೀವ್ ಚಾವ್ಲಾ ಗಡಿಪಾರಾಗಿ ಭಾರತಕ್ಕೆ ಬರಲಿದ್ದಾರೆ. ದೆಹಲಿ ಮೂಲದ ಉದ್ಯಮಿ ಸಂಜೀವ್ ಚಾವ್ಲಾ 1996 ರಲ್ಲಿ ಉದ್ಯಮ ವೀಸಾ ಪಡೆದು ಬ್ರಿಟನ್ ಗೆ ತೆರಳಿದ್ದರು. 2005 ರಲ್ಲಿ ಬ್ರಿಟನ್ ಪಾಸ್ ಪೋರ್ಟ್ ಪಡೆದು ಅಲ್ಲಿನ ಪೌರತ್ವವನ್ನೂ ಸಂಜೀವ್ ಚಾವ್ಲ ಗಳಿಸಿದ್ದರು. 2000 ರಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ
2000 ರಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಹ್ಯಾನ್ಸಿ ಕ್ರೊನಿಯೆ  ಜೊತೆಗೆ ಸಂಪರ್ಕ ಹೊಂದಿದ್ದು ಸಾಬೀತಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT