ಕ್ರಿಕೆಟ್

ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಲಂಕಾ ಆಟಗಾರ, ಮಲಿಂದಾ ಪುಷ್ಪ ಕುಮಾರ ಅಪರೂಪದ ಸಾಧನೆ

Nagaraja AB

 ಕೊಲಂಬೊ: ಪ್ರಥಮ ದರ್ಜೆ ಪಂದ್ಯದಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಎಡಗೈ ಸ್ಪಿನ್ನರ್  ಮಲಿಂದಾ ಪುಷ್ಪಕುಮಾರ ಅಪರೂಪದ ಸಾಧನೆ ಮಾಡಿದ್ದಾರೆ.

ಕೊಲಂಬೊ ಕ್ರಿಕೆಟ್ ಕ್ಲಬ್  ಪರ  ನಿನ್ನೆ ನಡೆದ ಪಂದ್ಯದಲ್ಲಿ 31 ವರ್ಷದ ಮಲಿಂದಾ ಪುಷ್ಪಕುಮಾರ 37 ರನ್ ಗಳಿಗೆ   ಎಲ್ಲಾ 10 ವಿಕೆಟ್ ಪಡೆದಿದ್ದಾರೆ.

ನಾಲ್ಕನೇ ಇನ್ನಿಂಗ್ಸ್ ನಲ್ಲಿ  349 ರನ್ ಗುರಿ ಬೆನ್ನತ್ತಿದ್ದ ಸಾರಾಸೆನ್ಸ್ ಸ್ಪೂರ್ಟ್ ಕ್ಲಬ್ ಮಲಿಂದಾ ಪುಷ್ಪಕುಮಾರ ಮಾರಕ ದಾಳಿಯಿಂದಾಗಿ  113 ರನ್  ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಮೊದಲ ಇನ್ನಿಂಗ್ಸ್ ನಲ್ಲಿ 6  ವಿಕೆಟ್ ಪಡೆದ ಮಲಿಂದಾ 110 ರನ್ ಗಳಿಗೆ 16 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಮುಕ್ತಾಯಗೊಳಿಸಿದರು.

1995ರ ನಂತರ 37 ರನ್ ಗಳಿಗೆ 10 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಕೀರ್ತಿಗೆ ಮಲಿಂದಾ ಪುಷ್ಪ ಕುಮಾರ ಪಾತ್ರರಾಗಿದ್ದಾರೆ.  ಪಾಕಿಸ್ತಾನದಲ್ಲಿ ಪೇಶಾವರ್ ವಿರುದ್ಧ ರಾವಲ್ಪಂಡಿ ಬ್ಲೂಸ್ ನಡುವಿನ ಪಂದ್ಯದಲ್ಲಿ ನಾಹೀಮ್ ಅಖ್ತರ್ 28 ರನ್ ಗಳಿಗೆ 10 ವಿಕೆಟ್ ಪಡೆದುಕೊಂಡಿದ್ದರು. ಈಗ ಆ ದಾಖಲೆಯನ್ನು ಶ್ರೀಲಂಕಾದ ಆಟಗಾರ ಸರಿಗಟ್ಟಿದ್ದು,  ಇತಿಹಾಸ ಸೃಷ್ಟಿಸಿದ್ದಾರೆ.

2009ರಲ್ಲಿ ಮುಲ್ತಾನ್- ಇಸ್ಲಾಮಾಬಾದ್ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಎಡಗೈ ಸ್ಪಿನ್ನರ್ ಜುಲ್ಫಿಕರ್ ಬಾಬರ್ 146 ರನ್ ಗಳಿಗೆ 10 ವಿಕೆಟ್ ಪಡೆದುಕೊಂಡಿದ್ದರು.

ಕೊಲಂಬೊ ಕ್ರಿಕೆಟ್ ಕ್ಲಬ್  235 ರನ್ ಗಳಿಸುವ ಮೂಲಕ  ಸಾರಾಸೆನ್ಸ್ ಸ್ಪೋರ್ಟ್ ಕ್ಲಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

SCROLL FOR NEXT