ಕ್ರಿಕೆಟ್

ಅಸಭ್ಯ ಹೇಳಿಕೆಯಿಂದ ಕ್ರಿಕೆಟ್ ಆಟಗಾರರ ಖ್ಯಾತಿಗೆ ಹಾನಿ: ಪಾಂಡ್ಯ, ರಾಹುಲ್ ವಿರುದ್ಧ ಹರ್ಭಜನ್ ಕಿಡಿ

Nagaraja AB

ಮುಂಬೈ: ಟಾಕ್ ಷೋವೊಂದರಲ್ಲಿ  ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಅಮಾನತು ಆಗಿರುವ  ಹಾರ್ದಿಕ್ ಪಾಂಡ್ಯ ಹಾಗೂ ರಾಹುಲ್  ವಿರುದ್ಧ  ಹಿರಿಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಅವರು ಕ್ರಿಕೆಟ್ ಆಟಗಾರರ ಖ್ಯಾತಿಗೆ ಹಾನಿಯನ್ನುಂಟುಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಟಾಕ್ ಷೋನಲ್ಲಿ ಹೆಂಗಸರ ಬಗ್ಗೆ ಅಸಭ್ಯವಾಗಿ ಮಾತುಗಳಾಡಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್  ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುವಂತೆ  ತಂಡದ ಸಂಸ್ಕೃತಿ ಬಗ್ಗೆಯೂ ಪ್ರಶ್ನೆ ಎಳುವಂತೆ ಮಾಡಿದೆ.

''ನಮ್ಮ ಸ್ನೇಹಿತರೊಂದಿಗೂ ಸಹ ನಾವು ಈ ರೀತಿಯಲ್ಲಿ ಮಾತನಾಡುವುದಿಲ್ಲ,ಆದರೆ, ರಾಹುಲ್ , ಹಾರ್ದಿಕ್ ಪಾಂಡ್ಯ ಸಾರ್ವಜನಿಕವಾಗಿ ಟಿವಿಯಲ್ಲಿ ಮಾತನಾಡಿದ್ದಾರೆ. ಹರ್ಭಜನ್ ಸಿಂಗ್, ಸಚಿನ್ ತೆಂಡೊಲ್ಕರ್, ಅನಿಲ್ ಕುಂಬ್ಳೆ  ಕೂಡಾ ಇದೇ ರೀತಿಯಲ್ಲಿರಬಹುದೆಂದು ಜನ ಯೋಚನೆ ಮಾಡುತ್ತಿದ್ದಾರೆ ಎಂದು ಚಾನಲ್ ವೊಂದಕ್ಕೆ ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ, ಮಹಿಳೆಯರ ಬಗ್ಗೆ ಮುಕ್ತವಾಗಿ ಮಾತುಗಳನ್ನಾಡಿದ್ದರು. ತಾನೂ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ. ಇದನ್ನೆಲ್ಲ ಪೋಷಕರಿಗೆ ಹೇಳಿಯೇ ಮಾಡಿದ್ದೇನೆ ಎಂದು ಹೇಳಿದ್ದರು. ಆದರೆ, ರಾಹುಲ್ ಸ್ವಲ್ಪ ಎಚ್ಚರಿಕೆಯಿಂದ ಮಾತನ್ನಾಡಿದ್ದರು.

ಇದು ವಿವಾದ ಉಂಟುಮಾಡಿದ್ದರಿಂದ ಬಿಸಿಸಿಐ ಅವರಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಿಂದ ಅಮಾನತುಗೊಳಿಸಿದೆ. ಬಿಸಿಸಿಐ ಉತ್ತಮ ತೀರ್ಮಾನ ಕೈಗೊಂಡಿದೆ. ಇದು ಮುಂದೆಯೂ ಮುಂದುವರೆಯಬೇಕು. ಇದು ನಿರೀಕ್ಷಿತವಾಗಿತ್ತು. ನನಗೇನೂ ಆಶ್ಚರ್ಯವಾಗಿಲ್ಲ ಎಂದು  ಆಫ್ ಸ್ಪೀನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

SCROLL FOR NEXT