ಶೋಯಬ್ ಅಖ್ತರ್-ಸರ್ಫರಾಜ್ ಅಹ್ಮದ್ 
ಕ್ರಿಕೆಟ್

'ಲೋ ಕರಿಯ' ಹೇಳಿಕೆ: ಸರ್ಫರಾಜ್‌ಗೆ ಕ್ರಿಕೆಟ್ ದಿಗ್ಗಜ ಶೋಯಬ್ ಅಖ್ತರ್ ತೀವ್ರ ತರಾಟೆ!

ಪಾಕ್ ನಾಯಕ ಸರ್ಫರಾಜ್ ಅಹ್ಮದ್ ದಕ್ಷಿಣ ಆಫ್ರಿಕಾ ಆಟಗಾರ ಆಂಡಿಲೆ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದು ಇದಕ್ಕೆ ರಾವಲ್ ಪಿಂಡಿ ಎಕ್ಸ್ ಪ್ರೆಸ್, ಕ್ರಿಕೆಟ್ ದಿಗ್ಗಜ ಶೋಯಬ್ ಅಖ್ತರ್ ತೀವ್ರ ಆಕ್ರೋಶ...

ಪಾಕ್ ನಾಯಕ ಸರ್ಫರಾಜ್ ಅಹ್ಮದ್ ದಕ್ಷಿಣ ಆಫ್ರಿಕಾ ಆಟಗಾರ ಆಂಡಿಲೆ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದು ಇದಕ್ಕೆ ರಾವಲ್ ಪಿಂಡಿ ಎಕ್ಸ್ ಪ್ರೆಸ್, ಕ್ರಿಕೆಟ್ ದಿಗ್ಗಜ ಶೋಯಬ್ ಅಖ್ತರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಡರ್ಬನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕ್ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಉರ್ದುವಿನಲ್ಲಿ ಆಂಡಿಲೆಯನ್ನು 'ಲೇ ಕರಿಯ..ನಿನ್ನ ಅಮ್ಮ ಇವತ್ತು ಎಲ್ಲಿ ಕೂತಿದ್ದಾಳೆ, ಇವತ್ತು ಏನ್ ಪ್ರಾರ್ಥನೆ ಮಾಡಿ ಬಂದಿದ್ದೀಯಾ? ಎಂದು ಹೇಳಿದ್ದು ಈ ಮಾತುಗಳು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿತ್ತು. ಈ ವಿಡಿಯೋ ಈಗ ಭಾರಿ ಚರ್ಚೆಗೆ ಕಾರಣವಾಗಿತ್ತು. 
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಶೋಯಬ್ ಅಖ್ತರ್ ಅವರು ಸರ್ಫರಾಜ್ ಅಹ್ಮದ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಹೇಳಿದ್ದರು. ಬಳಿಕ ತಮ್ಮ ವಿಡಿಯೋವನ್ನು ಅಖ್ತರ್ ಡಿಲೀಡ್ ಮಾಡಿದ್ದಾರೆ. ಇನ್ನು ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸರ್ಫರಾಜ್ ಅಹ್ಮದ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 
ಇನ್ನು ಸೋಲುತ್ತಿದ್ದೇವೆ ಎಂಬ ಹತಾಶೆಯಿಂದ ಸರ್ಫರಾಜ್ ಅಹ್ಮದ್ ನಾಯಕನ ಸ್ಥಾನದಲ್ಲಿದ್ದೇನೆ ಎನ್ನುವುದನ್ನು ಮರೆತ ಆಂಡಿಲೆರನ್ನ ಜನಾಂಗೀಯವಾಗಿ ನಿಂದನೆ ಮಾಡಿರುವುದು ಇದೀಗ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸರ್ಫರಾಜ್ ಈ ನಡೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿ ಸರ್ಫರಾಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 203 ರನ್ ಗಳಿಗೆ ಆಲೌಟ್ ಆಗಿತ್ತು. 204 ರನ್ ಗಳ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ದುಸೇನ್ ಅಜೇಯ 80 ಹಾಗೂ ಆಂಡಿಲೆ ಫೆಹ್ಲುಕ್ವೇವೊ ಅಜೇಯ 69 ರನ್ ಗಳ ನೆರವಿನಿಂದ ಪಂದ್ಯವನ್ನು ಗೆದ್ದು ಬೀಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?