ಕ್ರಿಕೆಟ್

ಟೀಂ ಇಂಡಿಯಾ ಬ್ಯಾಟಿಂಗ್ ಟೀಕಿಸಿದ ಮೈಕಲ್ ವಾನ್ ವಿರುದ್ಧ ಟ್ವೀಟಿಗರ ತೀವ್ರ ತರಾಟೆ

Srinivasamurthy VN
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಕೇವಲ 92 ರನ್ ಗಳಿಗೆ ಆಲೌಟ್ ಆದ ಭಾರತ ತಂಡದ ಬ್ಯಾಟಿಂಗ್ ಅನ್ನು ಟೀಕಿಸಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ವಿರುದ್ಧ ಟ್ವೀಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಹ್ಯಾಮಿಲ್ಟನ್ ನಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 30.5 ಓವರ್ ನಲ್ಲಿ 92 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ಈ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ 14.4 ಓವರ್ ನಲ್ಲಿ 93 ರನ್ ಗಳಿಸಿ  8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-1 ಹಿನ್ನಡೆ ಅನುಭವಿಸಿದೆ. 
ಇನ್ನು ಭಾರತ ತಂಡದ ಬ್ಯಾಟಿಂಗ್ ಕುರಿತು ಮಾತನಾಡುವ ಭರದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟ್ರೋಲ್ ಗೆ ತುತ್ತಾಗಿದ್ದಾರೆ. ಟ್ವಿಟರ್ ನಲ್ಲಿ ಈ ಕುರಿತು ಮಾತನಾಡಿರುವ ವಾನ್, ಇಂದಿನ ದಿನಗಳಲ್ಲೂ ತಂಡವೊಂದು ಏಕದಿನ ಕ್ರಿಕೆಟ್ ನಲ್ಲಿ 100 ರನ್ ಗಳಿಗಿಂತಲೂ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ ಎಂದರೆ ಆಘಾತವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಳೆದ ವಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 77ರನ್ ಗಳಿಗೆ ಆಲೌಟ್ ಆದ ಉದಾಹರಣೆ ನೀಡಿ ವಾನ್ ಕಾಲೆಳೆಯುತ್ತಿದ್ದಾರೆ. 
SCROLL FOR NEXT