ಸಂಗ್ರಹ ಚಿತ್ರ 
ಕ್ರಿಕೆಟ್

ಅಂಬಾಟಿ ರಾಯುಡು ನಿವೃತ್ತಿ: ಆಯ್ಕೆ ಸಮಿತಿ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ!

ಅಂಬಾಟಿ ರಾಯುಡು ನಿವೃತ್ತಿ ವಿಚಾರ ಭಾರತೀಯ ಕ್ರಿಕೆಟ್ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ರಾಯುಡು ನಿವೃತ್ತಿ ಪರ-ವಿರೋಧ ಚರ್ಚೆಗಳ ನಡುವೆಯೇ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಂಡನ್: ಅಂಬಾಟಿ ರಾಯುಡು ನಿವೃತ್ತಿ ವಿಚಾರ ಭಾರತೀಯ ಕ್ರಿಕೆಟ್ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ರಾಯುಡು ನಿವೃತ್ತಿ ಪರ-ವಿರೋಧ ಚರ್ಚೆಗಳ ನಡುವೆಯೇ ಮಾಜಿ ಕ್ರಿಕೆಟಿಗ ಹಾಗೂ ದೆಹಲಿ ಸಂಸದ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಮಹದಾಸೆ ಹೊಂದಿದ್ದ ಅಂಬಾಟಿ ರಾಯುಡು ತಂಡದ ಆಯ್ಕೆ ಬಳಿಕ ಆಯ್ಕೆ ಸಮಿತಿ ವಿರುದ್ಧ ಖುದ್ಧು ಹೋಗಿದ್ದರು. ಬಳಿಕ ತಂಡದಲ್ಲಿ ಸಾಲು ಸಾಲು ಆಟಗಾರರು ಗಾಯಗೊಂಡಾಗ ರಾಯುಡುಗೆ ಕರೆ ಬರಬಹುದು ಎಂದು ಭಾವಿಸಲಾಗಿತ್ತು. ಶಿಖರ್ ಧವನ್ ಗಾಯಗೊಂಡಾಗಲೇ ರಾಯುಡುಗೆ ಅವಕಾಶ ಸಿಗಬಹುದು ಎಂದು ಭಾವಿಸವಾಗಿತ್ತು. ಆದರೆ ವಿಜಯ್ ಶಂಕರ್ ಮತ್ತು ರಿಷಬ್ ಪಂತ್ ಗೆ ಬಿಸಿಸಿಐ ಬುಲಾವ್ ನೀಡಿತ್ತು. ಅಂತೆಯೇ ವಿಜಯ್ ಶಂಕರ್ ಗಾಯಗೊಂಡಾಗಲೂ ರಾಯುಡು ಆಗಮನದ ನಿರೀಕ್ಷೆ ಇತ್ತು. ಆದರೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದು ಮತ್ತೆ ರಾಯುಡುಗೆ ನಿರಾಸೆಯಾಗಿದೆ. ಇದೇಕಾರಣಕ್ಕೆ ನೊಂದ ರಾಯುಡು ನಿವೃತ್ತಿಯಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ಕೆಂಡ ಕಾರಿದ್ದು, ಇದು ಭಾರತೀಯ ಕ್ರಿಕೆಟ್‌ಗೆ ವಿಷಾದಕರ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಐಪಿಎಲ್ ಮತ್ತು ರಾಷ್ಟ್ರಕ್ಕಾಗಿ ಅಷ್ಟು ಉತ್ತಮವಾಗಿ ಆಡಿದ ಅವರಂತಹ ಕ್ರಿಕೆಟಿಗರು 3 ಶತಕ 10 ಅರ್ಧಶತಕವನ್ನು ಗಳಿಸಿದ್ದಾರೆ, ಮತ್ತು ಅದರ ಹೊರತಾಗಿಯೂ ಒಬ್ಬ ಆಟಗಾರ ನಿವೃತ್ತಿ ಹೊಂದಬೇಕಾದರೆ - ಇದು ಭಾರತೀಯ ಕ್ರಿಕೆಟ್‌ಗೆ ವಿಷಾದಕರ ಕ್ಷಣವಾಗಿದೆ" ಎಂದು ಗಂಭೀರ್ ಹೇಳಿದ್ದಾರೆ.
ಇನ್ನು ಮುಂದುವರೆದು  'ಐದು ಆಯ್ಕೆದಾರರು ಸೇರಿದರೂ ರಾಯುಡು ಅವರು ತಮ್ಮ ವೃತ್ತಿಜೀವನದಲ್ಲಿ ಗಳಿಸಿದಷ್ಟು ರನ್ ಸಾಧ್ಯವಾಗುತ್ತಿರಲಿಲ್ಲ. ಈ ನಿವೃತ್ತಿಯ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ರಾಯುಡು ಅವರ ಸ್ಥಾನದಲ್ಲಿದ್ದರೆ ಯಾರಿಗೆ ಅದರೂ ಅಷ್ಟೇ ಕೆಟ್ಟವೆನಿಸುತ್ತು ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ