38ನೇ ವಸಂತಕ್ಕೆ ಕಾಲಿಟ್ಟ ಮಾಹಿ, ದೇಶಾದ್ಯಂತ ಶುಭಾಶಯಗಳ ಸುರಿಮಳೆ!
ಭಾರತೀಯ ಕ್ರಿಕೆಟ್ ನ ರೂಪುರೇಷೆಯನ್ನೇ ಬದಲಿಸಿದ ಟೀಂ ಇಂಡಿಯಾ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನುಮ ದಿನವಾಗಿದ್ದು, 38ನೇ ವಸಂತಕ್ಕೆ ಕಾಲಿಟ್ಟ ಮಾಹಿಗೆ ದೇಶಾದ್ಯಂತ ಶುಭಾಶಯಗಳ ಸುರಿಮಳೆಗೈಯ್ಯಲಾಗುತ್ತಿದೆ.
ಲಂಡನ್: ಭಾರತೀಯ ಕ್ರಿಕೆಟ್ ನ ರೂಪುರೇಷೆಯನ್ನೇ ಬದಲಿಸಿದ ಟೀಂ ಇಂಡಿಯಾ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನುಮ ದಿನವಾಗಿದ್ದು, 38ನೇ ವಸಂತಕ್ಕೆ ಕಾಲಿಟ್ಟ ಮಾಹಿಗೆ ದೇಶಾದ್ಯಂತ ಶುಭಾಶಯಗಳ ಸುರಿಮಳೆಗೈಯ್ಯಲಾಗುತ್ತಿದೆ.
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ಲೋಕದ ಘಟಾನುಘಟಿ ಆಟಗಾರರು, ಕ್ರಿಕೆಟ್ ಲೋಕದ ದಿಗ್ಗಜರು ಟ್ವಿಟರ್ ಮೂಲಕ ಮಾಹಿಗೆ ಶುಭ ಕೋರುತ್ತಿದ್ದಾರೆ.
ಪ್ರಸ್ತುತ ಇಂಗ್ರೆಂಡ್ ನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಧೋನಿ, ಪತ್ನಿ ಸಮೇತರಾಗಿ ತಮ್ಮ ಜನುಮ ದಿನವನ್ನು ಆಚರಿಸಿಕೊಂಡಿದ್ದಾರೆ. ರಾತ್ರಿ 12ಕ್ಕೆ ಟೀಂ ಇಂಡಿಯಾ ಆಟಗಾರರೊಂದಿಗೆ ಮಾಹಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದು, ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ತಂಡದ ಸಹ ಆಟಗಾರರು ಮಾಹಿಗೆ ಕೇಕ್ ತಿನ್ನಿಸಿ ಶುಭ ಕೋರಿದ್ದಾರೆ.
ಅಲ್ಲದೆ ಮಾಹಿ ಜೊತೆ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ಡ್ಯಾನ್ಸ್ ಮಾಡಿರುವ ವಿಡಿಯೋ ಕೂಡ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದ್ದು. ಅಭಿಮಾನಿಗಳು ಕೂಡ ಮಾಹಿಗೆ ಶುಭಾಶಯ ಸುರಿಮಳೆಗರೆದಿದ್ದಾರೆ.
Mahi bhai wishing you a very happy birthdayy!! Thanks for everything you have taught me all these years! A great friend in a Captain, a true team players and a legend who makes anything look so easy!! God bless you Mahi bhai and janam din ki bahot bahot shubhkamnaye
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.