ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಮೈದಾನಕ್ಕಿಳಿದು ಆಡಿದ್ದಕ್ಕಿಂತ ಬೆಂಚ್ ಕಾಯುವುದರಲ್ಲೇ ಹೆಚ್ಚು ಸಮಯ ಕಳೆದಿದ್ದ ಭಾರತದ ಕ್ರಿಕೆಟಿಗ ರವೀಂದ್ರ ಜಡೇಜಾ ತಮಗೆ ಸಿಕ್ಕ ಅಲ್ಪ ಅವಕಾಶದಲ್ಲಿ ಮಹತ್ವದ ಸಾಧನೆ ಗೈದಿದ್ದಾರೆ.
ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ರವೀಂದ್ರ ಜಡೇಜಾ ಟೂರ್ನಿಯಲ್ಲಿ ವಿಶೇಷ ಸಾಧನೆ ಮಾಡಿದ್ದು, ಹಾಲಿ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಉಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯವೂ ಸೇರಿದಂತೆ ವಿಶ್ವಕಪ್ ಟೂರ್ನಿಯಲ್ಲಿ 2 ಪಂದ್ಯಗಳನ್ನು ಆಡಿರುವ ಜಡೇಜಾ ಒಟ್ಟು 41 ರನ್ ಗಳನ್ನು ಸೇವ್ ಮಾಡುವ ಮೂಲಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಆಟಗಾರರು ಗಾಯಗೊಂಡಾಗ, ಬೌಲರ್ ವಿಶ್ರಾಂತಿ ಪಡೆದಾಗ ಕ್ಷೇತ್ರ ರಕ್ಷಣೆಯಲ್ಲಿ ಕಾಣಿಸಿಕೊಳ್ಳುವ ಜಡೇಜಾ ತಮಗೆ ಸಿಕ್ಕ ಸಣ್ಣ ಅವಕಾಶದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಜಡೇಜಾ ಇನ್ನರ್ ರಿಂಗ್ ನಲ್ಲಿ 24 ರನ್ ಗಳನ್ನು ತಡೆದಿದ್ದರೆ, ಔಟ್ ಫೀಲ್ಡ್ ನಲ್ಲಿ 17 ರನ್ ಗಳನ್ನು ಸೇವ್ ಮಾಡಿದ್ದಾರೆ. ಆ ಮೂಲಕ ಜಡೇಜಾ ಒಟ್ಟು 41 ರನ್ ಗಳನ್ನು ಸೇವ್ ಮಾಡಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಇನ್ನು ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್ ಮಾರ್ಟಿನ್ ಗಪ್ಟಿಲ್ 9 ಪಂದ್ಯಗಳಿಂದ 34 ರನ್ ಸೇವ್ ಮಾಡಿದ್ದು, ಗ್ಲೇನ್ ಮ್ಯಾಕ್ಸ್ ವೆಲ್ 9 ಪಂದ್ಯಗಳಿಂದ 32 ರನ್ ಮತ್ತು 4ನೇ ಸ್ಥಾನದಲ್ಲಿರುವ ಮಾರ್ಕಸ್ ಸ್ಟೋಯಿನ್ಸ್ 7 ಪಂದ್ಯಗಳಿಂದ 27 ರನ್‍ಗಳನ್ನು ಸೇವ್ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics