ಕ್ರಿಕೆಟ್

ಕೂಡಲೇ ವಿಶ್ವಕಪ್ ತಂಡದಿಂದ ನಿಮ್ಮ ಆಟಗಾರನನ್ನು ಸ್ವದೇಶಕ್ಕೆ ಕಳುಹಿಸಿ, ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ತಂಡವಿದು?

Vishwanath S
ವಿಶ್ವಕಪ್ ಟೂರ್ನಿ ವೇಳೆ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು ಒಂದು ವಾರದ ಬಳಿಕ ವಿಷಯ ಬಹಿರಂಗವಾಗಿದೆ. ಹೌದು ಕೂಡಲೇ ವಿಶ್ವಕಪ್ ತಂಡದಿಂದ ನಿಮ್ಮ ಆಟಗಾರನನ್ನು ಸ್ವದೇಶಕ್ಕೆ ಕಳುಹಿಸಿ ಇಲ್ಲದಿದ್ದರೆ ನಿಮ್ಮ ತಂಡ ಸಂಕಷ್ಟಕ್ಕೆ ಗುರಿಯಾಗಲಿದೆ ಎಂದು ಐಸಿಸಿ ಎಚ್ಚರಿಕೆ ನೀಡಿತ್ತು. 
ವಿಶ್ವಕಪ್ ಪಂದ್ಯದ ವೇಳೆ ಆಫ್ಘಾನ್ ತಂಡದ ಬೌಲರ್ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಕೂಡಲೇ ಆಟಗಾರನನ್ನು ಸ್ವದೇಶಕ್ಕೆ ಕಳುಹಿಸಿ ಎಂದು ಐಸಿಸಿ ಆಫ್ಗಾನ್ ಗೆ ಎಚ್ಚರಿಕೆ ನೀಡಿತ್ತು. 
ಅಂದೇ ಈ ವಿಚಾರವನ್ನು ಬಹಿರಂಗಪಡಿಸಿದರೆ ಅದು ತಂಡಕ್ಕೆ ತೊಂದರೆಯಾಗುತ್ತದೆ ಎಂದು ಐಸಿಸಿ ಈ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಆದರೆ ಇದೀಗ ಆಟಗಾರನ ಕುರಿತು ಮಾಹಿತಿ ಹೊರ ಬಿದ್ದಿದೆ. 
ಆಫ್ಗಾನ್ ತಂಡದ ಬೌಲರ್ ಅಫ್ತಾಬ್ ಆಲಂ ಹೊಟೇಲ್ ನಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಆಟಗಾರನ ಮೇಲೆ ಶಸ್ತಿನ ಕ್ರಮ ಕೈಗೊಳ್ಳುವಂತೆ ಆಫ್ಗಾನ್ ಕ್ರಿಕೆಟ್ ಮಂಡಳಿಗೆ ಸೂಚಿಸಿತ್ತು. ಅದರಂತೆ ಆಲಂನನ್ನು ಟೂರ್ನಿಯಿಂದ ಕೈ ಬಿಟ್ಟು ಒಂದು ವರ್ಷ ನಿಷೇಧ ಹೇರಿದೆ. 
SCROLL FOR NEXT