ನನ್ನ ತಪ್ಪುಗಳಿಂದ ನೀವು ಬುದ್ಧಿ ಕಲಿಯಿರಿ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಬರಿಗೈಯಲ್ಲಿ ಹಿಂದಿರುಗಿದೆ. ಈ ಬಗ್ಗೆ ಚರ್ಚೆಗಳಾಗುತ್ತಿದ್ದು ಈ ನಡುವೆ ತಮ್ಮ ತಂಡದ ಯುವ ಆಟಗಾರರಿಗೆ ನನ್ನ ತಪ್ಪುಗಳಿಂದ ನೀವು ಬುದ್ಧಿ...
ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಬರಿಗೈಯಲ್ಲಿ ಹಿಂದಿರುಗಿದೆ. ಈ ಬಗ್ಗೆ ಚರ್ಚೆಗಳಾಗುತ್ತಿದ್ದು ಈ ನಡುವೆ ತಮ್ಮ ತಂಡದ ಯುವ ಆಟಗಾರರಿಗೆ ನನ್ನ ತಪ್ಪುಗಳಿಂದ ನೀವು ಬುದ್ಧಿ ಕಲಿಯಿರಿ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿನ ವಾತಾವರಣವು ತುಂಬಾ ಸ್ನೇಹಪರವಾಗಿದೆ. ಅಲ್ಲಿ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುಕ್ತ ಅವಕಾಶವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲಾ ಆಟಗಾರರನ್ನು ಸಮಾನ ಗೌರವದಿಂದ ಕಾಣಲಾಗುತ್ತದೆ. ಮೈದಾನದಲ್ಲಿ ಯುವ ಆಟಗಾರರು ಮಾಡುವ ತಪ್ಪುಗಳನ್ನು ಎತ್ತಿ ಆಡುವುದನ್ನು ವಿರೋಧಿಸುತ್ತಾರೆ ಎಂದರು.
ಜನರನ್ನು ಬೈಯುವ ಸಂಸ್ಕೃತಿ ಈಗ ಡ್ರೆಸ್ಸಿಂಗ್ ರೂಂನಲ್ಲಿ ಇಲ್ಲ. ನಾನು ಕುಲದೀಪ್ ಯಾದವ್ ಜೊತೆ ಎಷ್ಟು ಸ್ನೇಹಪೂರ್ವಕವಾಗಿರುತ್ತೋ ಅಷ್ಟೇ ಎಂಎಸ್ ಧೋನಿ ಜೊತೆ ಇರುತ್ತದೆ. ಇಲ್ಲಿ ಯಾರಿಗಾದರೂ ಏನು ಬೇಕಾದರೂ ಹೇಳುವ ವಾತಾವರಣವಿದೆ ಎಂದರು.