ಕ್ರಿಕೆಟ್

2nd Test: ನ್ಯೂಜಿಲೆಂಡ್ ನೆಲದಲ್ಲಿ ಧ್ರುವ್ ಜುರೆಲ್ ದಾಖಲೆ: ರಹಾನೆ ಬಳಿಕ 2ನೇ ಸ್ಥಾನ, ಎಲೈಟ್ ಗ್ರೂಪ್ ಸೇರ್ಪಡೆ!

2nd Test: ನ್ಯೂಜಿಲೆಂಡ್ ನೆಲದಲ್ಲಿ ಧ್ರುವ್ ಜುರೆಲ್ ದಾಖಲೆ: ರಹಾನೆ ಬಳಿಕ 2ನೇ ಸ್ಥಾನ, ಎಲೈಟ್ ಗ್ರೂಪ್ ಸೇರ್ಪಡೆ!
ಧ್ರುವ್ ಜುರೆಲ್ ವಿಶ್ವ ದಾಖಲೆ
Published On :

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಅಮೋಘ ಹೋರಾಟ ಪ್ರದರ್ಶಿಸಿದ್ದು, ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 170 ಎಸೆತಗಳಲ್ಲಿ 88 ರನ್ ಗಳಿಸಿದ ಜುರೆಲ್, ತಂಡದ ಕುಸಿತದ ನಡುವೆಯೂ ಏಕಾಂಗಿ ಹೋರಾಟ ನಡೆಸಿದರು.

ಈ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ 7ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗೆ ಬ್ಯಾಟಿಂಗ್ ಮಾಡಿ ಗರಿಷ್ಠ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಅಜಿಂಕ್ಯ ರಹಾನೆ ಅಗ್ರಸ್ಥಾನದಲ್ಲಿದ್ದಾರೆ. 2014ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ರಹಾನೆ 118 ರನ್ ಗಳಿಸಿದ್ದರು.

ಇದೀಗ 88 ರನ್ ಗಳಿಸಿರುವ ಜುರೆಲ್ ಎರಡನೇ ಸ್ಥಾನಕ್ಕೇರಿದ್ದಾರೆ. 1981ರಲ್ಲಿ ಆಕ್ಲೆಂಡ್‌ನಲ್ಲಿ ಸಯ್ಯದ್ ಕಿರ್ಮಾನಿ ಗಳಿಸಿದ್ದ 78 ರನ್ ಮೂರನೇ ಸ್ಥಾನದಲ್ಲಿದೆ. ಇದೇ ಸರಣಿಯ ಮೊದಲ ಟೆಸ್ಟ್‌ನಲ್ಲಿ ವೆಲ್ಲಿಂಗ್ಟನ್‌ನಲ್ಲಿ ಜುರೆಲ್ 78 ರನ್ ಗಳಿಸಿದ್ದರು.

10ನೇ ವಿಕೆಟ್‌ಗೆ ಮಹತ್ವದ ಜೊತೆಯಾಟ

ಜುರೆಲ್ ಅವರ ಬ್ಯಾಟಿಂಗ್ ಪ್ರದರ್ಶನದ ಮತ್ತೊಂದು ವಿಶೇಷವೆಂದರೆ ಗುರ್ನೂರ್ ಬ್ರಾರ್ ಜೊತೆಗಿನ 64 ರನ್‌ಗಳ ಜೊತೆಯಾಟ. ಭಾರತದ ಇನಿಂಗ್ಸ್ ಸಂಕಷ್ಟದಲ್ಲಿದ್ದಾಗ ಕೊನೆಯ ವಿಕೆಟ್‌ಗಾಗಿ ಈ ಜೋಡಿ ಅಮೂಲ್ಯ ರನ್ ಸೇರಿಸಿತು.

ಇದರೊಂದಿಗೆ ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಪರ 9ನೇ ಅಥವಾ 10ನೇ ವಿಕೆಟ್‌ಗೆ ದಾಖಲಾದ ಅತ್ಯಧಿಕ ಜೊತೆಯಾಟಗಳ ಪಟ್ಟಿಯಲ್ಲಿ ಜುರೆಲ್-ಬ್ರಾರ್ ಜೋಡಿ ಮೂರನೇ ಸ್ಥಾನ ಪಡೆದಿದೆ.

ಈ ಪಟ್ಟಿಯಲ್ಲಿ 1981ರಲ್ಲಿ ಆಕ್ಲೆಂಡ್‌ನಲ್ಲಿ ಸಯ್ಯದ್ ಕಿರ್ಮಾನಿ ಮತ್ತು ಶಿವಲಾಲ್ ಯಾದವ್ ದಾಖಲಿಸಿದ್ದ 105 ರನ್‌ಗಳ ಜೊತೆಯಾಟ ಅಗ್ರಸ್ಥಾನದಲ್ಲಿದೆ. 1990ರಲ್ಲಿ ಆಕ್ಲೆಂಡ್‌ನಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಅತುಲ್ ವಾಸನ್ ಗಳಿಸಿದ್ದ 86 ರನ್ ಎರಡನೇ ಸ್ಥಾನದಲ್ಲಿದೆ. ಜುರೆಲ್-ಬ್ರಾರ್ ಜೋಡಿ 64 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

Highest scores from No.7 or lower for IND in NZ

  • 118 - Ajinkya Rahane, Wellington, 2014

  • 88 - Dhruv Jurel, Christchurch, 2026

  • 78 - Syed Kirmani, Auckland, 1981

  • 78 - Dhruv Jurel, Wellington, 2026

  • 76 - Javagal Srinath, Hamilton, 1999

ಜುರೆಲ್ 170 ಎಸೆತಗಳನ್ನು ಎದುರಿಸಿ 14 ಬೌಂಡರಿಗಳ ನೆರವಿನಿಂದ 88 ರನ್ ಗಳಿಸಿದರು. ಆಕಾಶ್ ದೀಪ್ (29) ಜೊತೆ ಎಂಟನೇ ವಿಕೆಟ್‌ಗೆ 46 ರನ್ ಸೇರಿಸಿದ ಅವರು, ಗುರ್ನೂರ್ ಬ್ರಾರ್ (10) ಜೊತೆ ಒಂಬತ್ತನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟವಾಡಿದರು. ಕೊನೆಯ ವಿಕೆಟ್‌ಗೆ ಜಸ್‌ಪ್ರೀತ್ ಬುಮ್ರಾ ಜೊತೆ 19 ರನ್ ಸೇರಿಸಿದರು.

ಭಾರತದ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದರೂ, ಜುರೆಲ್ ಅವರ ತಾಳ್ಮೆಯ ಆಟ ತಂಡವನ್ನು 246 ರನ್‌ಗಳವರೆಗೆ ತಲುಪಿಸಿತು. ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 356 ರನ್ ಗಳಿಸಿದ್ದರಿಂದ ಭಾರತ 110 ರನ್‌ಗಳ ಹಿನ್ನಡೆ ಅನುಭವಿಸಿತು.

Highest 9th/10th wicket stands for India in New Zealand

  • 105 - Syed Kirmani & Shivlal Yadav - Auckland, 1981

  • 86 - Mohammad Azharuddin & Atul Wassan - Auckland, 1990

  • 64 - Dhruv Jurel & Gurnoor Brar - Christchurch, 2026

  • 61 - Rahul Dravid & Venkatesh Prasad - Hamilton, 1998/99

  • 58 - Mohammad Azharuddin & Venkatesh Prasad - Wellington, 1998/99

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.