ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಕಣಕ್ಕಿಳಿದ್ದಿದ್ದು ತೀವ್ರ ಸ್ಪರ್ಧೆಯಿಂದ ಕೂಡಿರಬೇಕಾಗಿತ್ತು. ಆದರೆ ಬಲಿಷ್ಠ ತಂಡಗಳೇ ಅಲ್ಪ ಮೊತ್ತಕ್ಕೆ ಅಲೌಟ್ ಆಗಿ ಪಂದ್ಯಗಳು ಸೋಲುತ್ತಿವೆ.
ಲಂಡನ್ ನ ಕಾರ್ಡಿಫ್ ನಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 29.2 ಓವರ್ ನಲ್ಲೇ ಕೇವಲ 136 ರನ್ ಗಳಿಗೆ ಸರ್ವಪತನ ಕಂಡಿತು. 137 ರನ್ ಗಳು ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ 16.1 ಓವರ್ ನಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಿ 137 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ನ್ಯೂಜಿಲ್ಯಾಂಡ್ ಪರ ಮಾರ್ಟಿನ್ ಗುಪ್ಟಿಲ್ ಅಜೇಯ 73 ಮತ್ತು ಮನ್ರೋ ಅಜೇಯ 58 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಲಂಕಾ ಪರ ದಿಮುತ್ ಕರುಣರತ್ನೆ ಅಜೇಯ 52, ಕುಶಾಲ್ ಪೆರೆರಾ 29, ತಿಸಾರ ಪೆರೆರಾ 27 ರನ್ ಪೇರಿಸಿದ್ದಾರೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಮ್ಯಾಟ್ ಹೆನ್ರಿ ಮತ್ತು ಫರ್ಗ್ಯೂಸನ್ ತಲಾ 3 ವಿಕೆಟ್, ಬೌಲ್ಟ್, ಗ್ರ್ಯಾಂಡ್ ಹೋಮ್, ನೀಶಾಮ್ ಮತ್ತು ಸ್ಯಾನ್ಟರ್ ತಲಾ 1 ವಿಕೆಟ್ ಪಡೆದಿದ್ದಾರೆ.