ಸರ್ಫರಾಜ್ ಅಹ್ಮದ್-ಶೋಯಬ್ ಅಖ್ತರ್
ನವದೆಹಲಿ: ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಚನ್ನಾಗಿ ತಿಂದು ತಿಂದು ಬೊಜ್ಜು ಬೆಳಸಿಕೊಂಡಿದ್ದು, ಹೊಟ್ಟೆ ಮುಖ ಊದಿಕೊಂಡಿದ್ದು ಚೆಂಡನ್ನು ಹಿಡಿಯಲು ಓದ್ದಾಡುತ್ತಿದ್ದಾರೆ. ಈತ ಕ್ರಿಕೆಟ್ ಗೆ ಹಾಗೂ ಪಾಕ್ ತಂಡದ ನಾಯಕ ಸ್ಥಾನಕ್ಕೆ ಅಸಮರ್ಥ ಎಂದು ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಛೇಡಿಸಿದ್ದಾರೆ.
ಐಸಿಸಿ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡ ಕಳಪೆ ಪ್ರದರ್ಶನ ನೀಡಿದ್ದು ಇದರಿಂದ ಬೇಸರಗೊಂಡಿರುವ ಮಾಜಿ ಪಾಕ್ ಆಟಗಾರ ಶೋಯಬ್ ಅಖ್ತರ್ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಓರ್ವ ಅಸಮರ್ಥ ನಾಯಕ ಎಂದು ಹೇಳಿರುವುದಾಗಿ ಹಿರಿಯ ಪಾಕ್ ಪತ್ರಕರ್ತ ಸಾಜ್ ಸಿದಿಖ್ ಟ್ವೀಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆ ಸರ್ಫರಾಜ್ ಅಹ್ಮದ್ ಹೊಟ್ಟೆ ಮುಂದಕ್ಕೆ ಬಂದಿತ್ತು. ಅಲ್ಲದೆ ಆತನ ಮುಖ ಊದಿಕೊಂಡಿದ್ದು ಕೀಪಿಂಗ್ ಮಾಡುವಾಗ ಚೆಂಡನ್ನು ಹಿಡಿಯಲು ವಿಫಲರಾಗುತ್ತಿದ್ದರು. ಇಂತಹ ಆಟಗಾರ ಪ್ರಸ್ತತು ಪಾಕ್ ಕ್ರಿಕೆಟ್ ನಲ್ಲಿ ಅಸಮರ್ಥ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಕೇವಲ 105 ರನ್ ಗಳಿಗೆ ಆಲೌಟ್ ಆಗಿತ್ತು. 106 ರನ್ ಗಳ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ತಂಡ 13.4 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಬಾರಿಸಿ ಗೆಲುವಿನ ನಗೆ ಬೀರಿತ್ತು.