ನವದೆಹಲಿ: ವಿಶ್ವಕಪ್ ಟೂರ್ನಿ ಕುರಿತಂತೆ ನ್ಯೂಜಿಲ್ಯಾಂಡ್ ಮಾಜಿ ನಾಯಕ ಬ್ರೆಂಡಂ ಮೆಕಲಮ್ ನುಡಿದಿದ್ದ ಭವಿಷ್ಯ ಸುಳ್ಳಾಗಿದ್ದರಿಂದ ಬಾಂಗ್ಲಾ ಅಭಿಮಾನಿಗಳು ಮೆಕಲಮ್ ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಮೆಕಲಮ್ ಭವಿಷ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಸೋಲಲಿದೆ ಎಂದು ಬರೆದಿದ್ದರು. ಆದರೆ ಇದು ಸುಳ್ಳಾಗಿದ್ದು ಬಾಂಗ್ಲಾದೇಶ ಗೆದ್ದ ಕೂಡಲೇ ಬಾಂಗ್ಲಾದೇಶ ಅಭಿಮಾನಿಗಳು ಮೆಕಲಮ್ ರನ್ನು ಟ್ರೋಲ್ ಮಾಡಿದ್ದಾರೆ.
ಬಾಂಗ್ಲಾದೇಶ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಲಿದೆ. ಇದು ಶ್ರೀಲಂಕಾ ವಿರುದ್ಧವಷ್ಟೇ ಉಳಿದಂತೆ 8 ಪಂದ್ಯಗಳನ್ನು ಸೋಲಲಿದೆ ಎಂದು ಹೇಳಿದ್ದರು.
ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 330 ರನ್ ಪೇರಿಸಿತ್ತು. ನಂತರ ಆಫ್ರಿಕಾವನ್ನು 309 ರನ್ ಗಳಿಗೆ ಕಟ್ಟಿ ಹಾಕಿ 21 ರನ್ ಗಳಿಂದ ಜಯ ಗಳಿಸಿತ್ತು.