ಶಾಕಿಬ್ ಶತಕದಾಟ: ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾಗೆ 7 ವಿಕೆಟ್ ಭರ್ಜರಿ ಜಯ
ಬಾಂಗ್ಲಾ ಸ್ಟಾರ್ ಆಟಗಾರ ಆಲ್ ರೌಂಡರ್ ಶಾಕಿಬ್ ಅಲ್ ಹಸನ್ ಶತಕ, ಲಿಟನ್ ದಾಸ್ ಅರ್ಧ ಶತಕದ ನೆರವಿನಿಂದ ಸೋಮವಾರ ನಡೆದ ವಿಶ್ವಕಪ್ ಕ್ರಿಕೆಟ್ ಸರಣಿಯ ವೆಸ್ಟ್....
ಟೌಂಟನ್: ಬಾಂಗ್ಲಾ ಸ್ಟಾರ್ ಆಟಗಾರ ಆಲ್ ರೌಂಡರ್ ಶಾಕಿಬ್ ಅಲ್ ಹಸನ್ ಶತಕ, ಲಿಟನ್ ದಾಸ್ ಅರ್ಧ ಶತಕದ ನೆರವಿನಿಂದ ಸೋಮವಾರ ನಡೆದ ವಿಶ್ವಕಪ್ ಕ್ರಿಕೆಟ್ ಸರಣಿಯ ವೆಸ್ಟ್ ಇಂದೀಸ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇದರೊಡನೆ ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆಲುವು ದಾಖಲಿಸಿದ ತಂಡ ಎಂಬ ಕೀರ್ತಿಗೆ ಬಾಂಗ್ಲಾ ಪಾತ್ರವಾಗಿದೆ.
ಶಾಕಿಬ್ 99 ಎಸೆತಗಳಲ್ಲಿ 124 ಮತ್ತು ಲಿಂಟನ್ ದಾಸ್ 69 ಎಸೆತಗಳಲ್ಲಿ94 ರನ್ ಗಳಿಸಿ ಬಾಂಗ್ಲಾದೇಶವನ್ನು 3 ವಿಕೆಟ್ ಗೆ 322ರನ್ ಗಳಿಸುವಂತೆ ಮಾಡಿದ್ದರು.
ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ 2011ರಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ 329-7 ಚೇಸ್ ಮಾಡಿ ಜಯ ಸಾಧಿಸಿದ ಹೊರತಾಗಿ ಇದು ಬೃಹತ್ ಮೊತ್ತ ಬೆನ್ನಟ್ಟಿ ಪಡೆದ ಗೆಲುವಾಗಿದೆ.
ಇನ್ನು ಸರಣಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದ ನಂತರ ಬಾಂಗ್ಲಾ ಪಡೆ ಸೆಮಿಫೈನಲ್ ತಲುಪುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.