ಕ್ರಿಕೆಟ್

6 ರನ್‌ಗಳಿಗೆ ಆಲೌಟ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೇ ಕಳಪೆ ದಾಖಲೆ; ಗಲ್ಲಿ ಕ್ರಿಕೆಟ್‌ಗಿಂತ ಕೀಳು!

Vishwanath S
ಕಿಗಲಿ(ರವಂಡಾ): ಇಂಗ್ಲೆಂಡ್‍ ವಿರುದ್ಧ ಐಸಿಸಿ ವಿಶ್ವಕಪ್‍ ಪಂದ್ಯದಲ್ಲಿ 9 ಓವರ್‌ಗಳಿಗೆ 104 ರನ್‌ ಚಚ್ಚಿಸಿಕೊಂಡಿದ್ದ ಅಫ್ಘಾನಿಸ್ತಾನದ ರಶೀದ್‍ ಖಾನ್‍ ಬಗ್ಗೆ ಎಲ್ಲರೂ ಮಾತನಾಡುವಾಗಲೇ ಮಹಿಳಾ ಟಿ-20 ಪಂದ್ಯದಲ್ಲಿ ತಂಡವೊಂದು ಕೇವಲ ಆರು ರನ್‌ಗಳಿಗೆ ಆಲೌಟ್‌ ಆಗಿರುವ ಪ್ರಸಂಗವೊಂದು ನಡೆದಿದೆ.
ರವಾಂಡ ರಾಜಧಾನಿ ಕಿಗಲಿ ನಗರದಲ್ಲಿ ನಡೆದ ಕ್ವಿಬುಕಾ ಮಹಿಳಾ ಟಿ-20 ಪಂದ್ಯದಲ್ಲಿ ರ್ವಾಂಡ್‌ ತಂಡದ ವಿರುದ್ಧ ಮಾಲಿ ಕೇವಲ ಆರು ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ನೂತನ ದಾಖಲೆ ನಿರ್ಮಿಸಿದೆ. 
ಮೊದಲು ಬ್ಯಾಟಿಂಗ್‌ ಮಾಡಿದ ಮಾಲಿ ತಂಡ ಒಂಭತ್ತು ಓವರ್‌ಗಳಿಗೆ 6 ರನ್‌ ಗಳಿಸಿ ಸರ್ವಪತನವಾಯಿತು. ಈ ಆರು ರನ್‌ಗಳಲ್ಲಿ ಕೇವಲ ಒಂದು ರನ್‌ ಆರಂಭಿಕ ಆಟಗಾರ್ತಿ ಮರಿಯಾಮ ಸಮಕೆ ಗಳಿಸಿದ್ದು, ಇನ್ನುಳಿದ ಐದು ರನ್‌ ರ್ವಾಂಡ ನೀಡಿದ ಇತರೆ ರನ್‌ಗಳಾಗಿವೆ. ಇನ್ನುಳಿದ ಎಲ್ಲ ಆಟಗಾರ್ತಿಯರು ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ. 
ರ್ವಾಂಡ್‌ ತಂಡ 19ರ ಪ್ರಾಯದ ಜೋಸಿಯಾನ ರನ್‌ ನೀಡದೆ ಮೂರು ವಿಕೆಟ್‌ ಪಡೆದರು. ಮಧ್ಯಮ ವೇಗಿ ಮೇರಿ ಡಯೇನ್ ಹಾಗೂ ಲೆಗ್‌ ಸ್ಪಿನ್ನರ್‌ ಮಾರ್ಗುರಿಟ್ಟೆ ಅವರು ತಲಾ ಎರಡು ವಿಕೆಟ್‌ ಕಬಳಿಸಿದರು.
ಬಳಿಕ 7 ರನ್‌ ಗುರಿ ಬೆನ್ನತ್ತಿದ ರ್ವಾಂಡ್‌ ವನಿತೆಯರು ನಾಲ್ಕು ಎಸೆತಗಳಲ್ಲಿ ಇನ್ನೂ 116 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿತು. ಇದರೊಂದಿಗೆ ಮಹಿಳಾ ಟಿ-20 ಇತಿಹಾಸದಲ್ಲಿ ಅತಿ ದೊಡ್ಡ ಅಂತರದ ಗೆಲುವು ಇದಾಯಿತು.
SCROLL FOR NEXT