ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರೆಸಿರುವ ಟೀಂ ಇಂಡಿಯಾ ಅದಾಗಲೇ ಸೆಮಿಫೈನಲ್ ಗೆ ಎಂಟ್ರಿ ಕೊಡುವುದು ಬಹುತೇಕ ನಿಶ್ಚಿತವಾಗಿದೆ. ಇನ್ನು ಟೀಂ ಇಂಡಿಯಾ ಗೆಲುವಿನ ಮೇಲೆ ತಮ್ಮ ಸೆಮಿಫೈನಲ್ ಎಂಟ್ರಿ ಕನಸನ್ನು ಪಾಕಿಸ್ತಾನ ಕಾಣುತ್ತಿದೆ.
ಹೌದು, ಭಾರತ ಮುಂದಿನ ಮೂರು ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿದರೆ ಅದು ಪಾಕಿಸ್ತಾನಕ್ಕೆ ವರದಾನವಾಗಲಿದೆ. ವಿಶ್ವಕಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಮವಾಗಿ ಮೂರು ಸ್ಥಾನಗಳನ್ನು ಅಲಂಕರಿಸಿದ್ದು ನಾಲ್ಕನೇ ಸ್ಥಾನಕ್ಕಾಗಿ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಹವಣಿಸುತ್ತಿದೆ.
ಇನ್ನು ಮುಂದಿನ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲ್ಲಲೇಬೇಕಾದ ಅನಿವಾರ್ಯತೆ ಇಂಗ್ಲೆಂಡ್ ಗೆ ಇದೆ. ಹೌದು ಇಂಗ್ಲೆಂಡ್ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣೆಸಲಿದೆ. ಈ ಪಂದ್ಯ ಇಂಗ್ಲೆಂಡ್ ಸೆಮಿಸ್ ಎಂಟ್ರಿಗೆ ಬಹುಮುಖ್ಯ ಪಾತ್ರವಹಿಸುತ್ತದೆ. ಹೀಗಾಗಿ ಇಂಗ್ಲೆಂಡ್ ಅಜೇಯ ಟೀಂ ಇಂಡಿಯಾ ವಿರುದ್ಧ ಗೆಲ್ಲಲೇಬೇಕಿದೆ.
ಇನ್ನು ಟೀಂ ಇಂಡಿಯಾಗೆ ಮೂರು ಪಂದ್ಯಗಳು ಬಾಕಿಯಿದ್ದು ಈ ಮೂರರಲ್ಲಿ ಒಂದು ಪಂದ್ಯ ಗೆದ್ದರೆ ಸಾಕು ಸುಲಭವಾಗಿ ಭಾರತ ಸೆಮಿಸ್ ಗೆ ಹೋಗುತ್ತದೆ. ಆದರೆ ಭಾರತಕ್ಕೆ ಪಾಕಿಸ್ತಾನ ಸೆಮಿಫೈನಲ್ ಗೆ ಬರುವುದು ಇಷ್ಟವಿಲ್ಲ. ಹೀಗಾಗಿ ಭಾರತ ಇಂಗ್ಲೆಂಡ್ ನಂತರದ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಸೋತು ಪಾಕಿಸ್ತಾನವನ್ನು ಸೆಮಿಸ್ ಗೆ ಬರದಂತೆ ಮಾಡುವ ಸಾಧ್ಯೆತಗಳು ಹೆಚ್ಚಿವೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಕಾರಣ ಆಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾದ ಕಳಪೆ ಆಟ ಉತ್ತಮ ನಿದರ್ಶನ. ಆಫ್ಗಾನಿಸ್ತಾನ ವಿರುದ್ಧ ಭಾರತ ಗೆದ್ದರೂ ಎಷ್ಟು ಪ್ರಯಾಸಪಟ್ಟಿದೆ ಎಂದು ನೋಡಿದ್ದೇವೆ. ಹೀಗೆ ಪಾಕ್ ಅನ್ನು ಸೆಮಿಸ್ ನಿಂದ ಹೊರಗಿಡಲು ಭಾರತ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಸೋಲಲು ಬಯಿಸಿದೆ ಎಂದು ಬಸಿತ್ ಅಲಿ ಹೇಳಿದ್ದಾರೆ.
ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ಇನ್ನುಳಿಂದ 2 ಪಂದ್ಯಗಳಲ್ಲೂ ಗೆದ್ದರೆ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಬಹುತೇಕ ಹೆಚ್ಚಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos