ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಗಳು ದಾಖಲಾಗುತ್ತಿರುತ್ತವೆ. ಅತ್ಯುತ್ತಮ ಸಿಕ್ಸ್, ಅತ್ಯುತ್ತಮ ಕ್ಯಾಚ್, ಅತ್ಯುತ್ತಮ ರನೌಟ್ ನಂತೆ ಈ ಬಾರಿ ಅತ್ಯುತ್ತಮ ಯಾರ್ಕರ್ಗಳು ಸೃಷ್ಟಿಯಾಗಿವೆ.
ಹೌದು ಪ್ರಸ್ತುತ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ವೇಗಿಗಳಿಗೆ ಪೂರಕವಾಗಿದೆ. ಅಂತೆ ತಮ್ಮ ಸತ್ತಾ ತೋರಿಸುತ್ತಿರುವ ವೇಗಿಗಳು ಯಾರ್ಕರ್ಗಳು ಹಾಕಿ ಮಿಂಚಿದ್ದಾರೆ. ಇನ್ನು ಟೂರ್ನಿಯಲ್ಲಿ ದಾಖಲಾದ ಅತ್ಯುತ್ತಮ ಯಾರ್ಕರ್ ಬೌಲ್ ಗಳ ವಿಡಿಯೋ ಇಲ್ಲಿದೆ ನೋಡಿ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಯೂಟ್ಯೂಬ್ ನಲ್ಲಿ ಬೆಸ್ಟ್ ಯಾರ್ಕರ್ಗಳ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ, ಆಸ್ಟ್ರೇಲಿಯಾ ತಂಡದ ವೇಗಿ ಮಿಶೆಲ್ ಸ್ಟಾರ್ಕ್, ಇಂಗ್ಲೆಂಡ್ ವೇಗಿ ಮಾರ್ಕ್ ವುಡ್, ವಿಂಡೀಸ್ ವೇಗಿ ಶಲ್ಡನ್ ಕಾಟ್ರೆಲ್ ಪಾಕ್ ತಂಡದ ಅಮಿರ್ ಮತ್ತು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸಹ ಯಾರ್ಕರ್ ಬಾಲ್ ಹಾಕಿ ವಿಕೆಟ್ ಪಡೆದು ಮಿಂಚಿದ್ದಾರೆ.