ಸಂಗ್ರಹ ಚಿತ್ರ 
ಕ್ರಿಕೆಟ್

ಮತ್ತೆ ಮೌಕಾ.. ಮೌಕಾ.. ಇಂಡೋ-ಇಂಗ್ಲೆಂಡ್ ಪಂದ್ಯದ ನಡುವೆ ವೈರಲ್ ಆಯ್ತು ಹೊಸ ಜಾಹಿರಾತು!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯುತ್ತಿರುವಂತೆಯೇ ಮತ್ತೊಂದು ಮೌಕಾ.. ಮೌಕಾ ಜಾಹಿರಾತು ವೈರಲ್ ಆಗುತ್ತಿದೆ.

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯುತ್ತಿರುವಂತೆಯೇ ಮತ್ತೊಂದು ಮೌಕಾ.. ಮೌಕಾ ಜಾಹಿರಾತು ವೈರಲ್ ಆಗುತ್ತಿದೆ.
ಇಂದಿನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಭಾರತಕ್ಕೆ ಅಷ್ಟೇನೂ ಮಹತ್ವದ್ದು ಅಲ್ಲದೇ ಹೋದರೂ ಸೆಮೀಸ್ ನಲ್ಲಿ ಸ್ಥಾನ ಗಟ್ಟಿಗಳಿಸಿಕೊಳ್ಳಲು ಇಂಗ್ಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳಿಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. 
ಇಂಗ್ಲೆಂಡ್ ಪಾಲಿಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಪಂದ್ಯ ಗೆದ್ದರೆ ಮಾತ್ರ ಸೆಮೀಸ್ ನಲ್ಲಿ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಸೋತರೆ ಪಾಕಿಸ್ತಾನಕ್ಕೆ ಆ ಅವಕಾಶ ಲಭಿಸುವ ಸಾಧ್ಯತೆ ಇದೆ. ಪಾಕಿಸ್ತಾನ ಮಾತ್ರವಲ್ಲದೇ ಸೆಮೀಸ್ ರೇಸ್ ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ ಇವೆ. ಪಾಕಿಸ್ತಾನ ತಂಡ ತಾನಾಡಿರುವ 8 ಪಂದ್ಯಗಳ ಪೈಕಿ 4 ಪಂದ್ಯ ಗೆದ್ದು 8 ಅಂಕಗಳನ್ನು ಹೊಂದಿದೆ. ಅಂತೆಯೇ ಬಾಂಗ್ಲಾದೇಶ ತಂಡ  ಪಂದ್ಯಗಳನ್ನಾಡಿ 3ರಲ್ಲಿ ಗೆದ್ದು 8 ಅಂಕ ಪಡೆದಿದೆ. ಇನ್ನು ಶ್ರೀಲಂಕಾ ತಂಡ 7 ಪಂದ್ಯಗಳನ್ನಾಡಿ 2 ಪಂದ್ಯ ಗೆದ್ದು 6 ಅಂಕಗಳನ್ನು ಹೊಂದಿದೆ. ಈ ಪೈಕಿ ಶ್ರೀಲಂಕಾ ತಂಡದ ಸೆಮೀಸ್ ಆಸೆ ಕ್ಷೀಣ ಎನ್ನಬಹುದು. ಲಂಕಾ ಬಳಿ ಇನ್ನೂ ಒಂದು ಪಂದ್ಯವಿದ್ದು, ಆ ಪಂದ್ಯವನ್ನು ಗೆದ್ದರೆ ಲಂಕಾದ ಅಂಕಗಳಿಕೆ 8ಕ್ಕೆರುತ್ತದೆ. ಆದರೆ ಬಾಂಗ್ಲಾದೇಶ ಕೂಡ ಒಂದು ಪಂದ್ಯವನ್ನಾಡಲಿದ್ದು, ಆ ಪಂದ್ಯ ಗೆದ್ದರೆ ಬಾಂಗ್ಲಾ ಅಂಕ ಗಳಿಕೆ 9ಕ್ಕೆ ಏರಿಕೆಯಾಗಿ ಆ ತಂಡಕ್ಕೆ ಅವಕಾಶದ ಬಾಗಿಲು ತೆರೆಯುತ್ತದೆ.
ಇದೇ ಕಾರಣಕ್ಕೆ ಇದೀಗ ಮತ್ತೆ ಮೌಕಾ ಮೌಕಾ ಜಾಹಿರಾತು ವೈರಲ್ ಆಗುತ್ತಿದ್ದು, ಭಾರತದ ಗೆಲುವಿನ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತದ ಎದುರು ವಿಶ್ವಕಪ್ ನಲ್ಲಿ ಸೆಣಸುವ ಅವಕಾಶ ದೊರೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?