ನಟ ರಿತೇಶ್ ತೊಡೆ ಮೇಲೆ ಜೆನಿಲಿಯಾ ಕುಳಿತ ಫೋಟೊ ಶೇರ್ ಮಾಡಿ ಟಕ್ಕರ್ ನೀಡಿದ ರಾಹುಲ್ ಗಾಂಧಿ!
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ನಟ ರಿತೇಶ್ ದೇಶಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ಡಿಸೋಜಾ ಅವರೊಂದಿಗೆ ಕಾಣಿಸಿಕೊಂಡಿರುವುದು ಮತ್ತೊಮ್ಮೆ ಅಂತರ್ಜಾಲದ ಗಮನ ಸೆಳೆದಿದೆ. ವಿಶೇಷವಾಗಿ, ತಮ್ಮ ಪೋಷಕರಾದ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಾಗೂ ಅವರ ಸಂಬಂಧದ ಕುರಿತು ರಾಹುಲ್ ಗಾಂಧಿ ಇತ್ತೀಚೆಗೆ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ, ಈ ಇನ್‌ಸ್ಟಾಗ್ರಾಂ ಸ್ಟೋರಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ, ರಿತೇಶ್ ಅವರ ಪೋಸ್ಟ್ ಅನ್ನು ಯಾವುದೇ ಶೀರ್ಷಿಕೆಯನ್ನು ಸೇರಿಸದೆಯೇ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಅವರು ಆ ಪೋಸ್ಟ್‌ಗೆ ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಕಿಂಗ್'ನ 'ತು ಮಿಲ್ ಜಾಯೇ' ಹಾಡನ್ನು ಸೇರಿಸಿದ್ದಾರೆ.
ರಿತೇಶ್ ಹಂಚಿಕೊಂಡಿರುವ ಚಿತ್ರದಲ್ಲಿ ಜೆನಿಲಿಯಾ ಅವರ ಮಡಿಲಲ್ಲಿ ಕುಳಿತಿದ್ದಾರೆ. ಇದು ರಾಹುಲ್ ಗಾಂಧಿ ಅವರು ಇತ್ತೀಚೆಗೆ ತಮ್ಮ ಪೋಷಕರ ಬಗ್ಗೆ ಹಂಚಿಕೊಂಡಿದ್ದ ಒಂದು ಪ್ರಸಂಗದೊಂದಿಗೆ ಸಾಮ್ಯತೆ ಹೊಂದಿದೆ. ಈ ಚಿತ್ರಕ್ಕೆ, 'ಇಬ್ಬರಿಗೆ ಟೇಬಲ್, ಆದರೆ ಕುರ್ಚಿ ಒಂದೇ' ಎಂದು ಶೀರ್ಷಿಕೆ ನೀಡಲಾಗಿದೆ.
ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey Of Love) ಬಿಡುಗಡೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ತಮ್ಮ ಪೋಷಕರ ಸಂಬಂಧದ ಕುರಿತು ಮಾತನಾಡಿದ್ದರು. ಅದರ ಬೆನ್ನಲ್ಲೇ, ಕೆಲವೇ ದಿನಗಳ ನಂತರ ರಾಹುಲ್ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ತನ್ನ ಬಾಲ್ಯದಲ್ಲಿನ ಒಂದು ಘಟನೆಯನ್ನು ಹಂಚಿಕೊಂಡ ರಾಹುಲ್, ತಮ್ಮ ಮನೆಯಲ್ಲಿ ಊಟದ ಸಮಯದಲ್ಲಿ ತಂದೆ-ತಾಯಿ ಇಬ್ಬರೂ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದುದರ ಬಗ್ಗೆ, ಹಾಗೂ ತಾಯಿ ತಂದೆಯ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದುದರ ಬಗ್ಗೆ ವಿವರಿಸಿದರು. ತಮ್ಮ ಸ್ನೇಹಿತರ ಪೋಷಕರಲ್ಲಿ ಇಂತಹ ಅಭ್ಯಾಸ ಇಲ್ಲದಿರುವುದನ್ನು ಕಂಡಾಗ, ತಮಗೆ ಅದು ವಿಚಿತ್ರ ಎನಿಸಿತ್ತು ಎಂಬುದನ್ನೂ ಅವರು ನೆನಪಿಸಿಕೊಂಡರು.
'ಅವರು ಜಗಳವಾಡಿದ್ದನ್ನು ನಾವು ನೋಡಿದ್ದು ಒಂದೇ ಬಾರಿ. ಬೇರೆ ಯಾವುದೇ ಮನೆಯಲ್ಲಿಯೂ ನಾನು ಇದನ್ನು ಕಂಡಿಲ್ಲ. ಪ್ರತಿ ಬಾರಿ ಊಟಕ್ಕೆ ಕುಳಿತಾಗಲೂ, ಅಲ್ಲಿ ಅಪ್ಪ ಇರುತ್ತಿದ್ದರು ಮತ್ತು ಅಪ್ಪನ ತೊಡೆಯ ಮೇಲೆ ಅಮ್ಮ ಕುಳಿತಿರುತ್ತಿದ್ದರು' ಎಂದರು.
'ನಾನು ಇದೊಂದು ಸಾಮಾನ್ಯ ವಿಷಯ ಎಂದುಕೊಂಡಿದ್ದೆ. ಹಾಗಾಗಿ ನಾನು ನನ್ನ ಸ್ನೇಹಿತರ ಮನೆಗೆ ಹೋದಾಗ, ಅಲ್ಲಿ ಅವರು (ಅವರ ತಂದೆ-ತಾಯಿ) ಒಬ್ಬರ ತೊಡೆಯ ಮೇಲೆ ಇನ್ನೊಬ್ಬರು ಕುಳಿತಿರುತ್ತಿರಲಿಲ್ಲ. ಆಗ ನಾನು ನನ್ನ ಸ್ನೇಹಿತರನ್ನು, 'ಏನಿದು? ನಿಮ್ಮ ತಾಯಿ ನಿಮ್ಮ ತಂದೆಯ ತೊಡೆಯ ಮೇಲೆ ಏಕೆ ಕುಳಿತಿಲ್ಲ?' ಎಂದು ಕೇಳುತ್ತಿದ್ದೆ. ಆದರೆ ನಮ್ಮ ಮನೆಯಲ್ಲಿ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಸಮಯದಲ್ಲಿ, ಅಮ್ಮ ಯಾವಾಗಲೂ ಅಪ್ಪನ ತೊಡೆಯ ಮೇಲೆಯೇ ಕುಳಿತಿರುತ್ತಿದ್ದರು' ಎಂದು ಅವರು ಹೇಳಿದರು.
ಅವರ ಈ ಹೇಳಿಕೆಯು ರಾಜಕೀಯ ಎದುರಾಳಿಗಳ ಪ್ರತಿಕ್ರಿಯೆಗೆ ಕಾರಣವಾಯಿತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


