ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ
ಗುವಾಹಟಿ: ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಬಾರಿಸಿದ ಅರ್ಧಶತಕದ ಬಲದಿಂದ ಇಂಗ್ಲೆಂಡ್ 5 ವಿಕೆಟ್ ಗಳಿಂದ ಭಾರತ ವನಿತೆಯರ ತಂಡವನ್ನು ಮಣಿಸಿ, ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ಗೆ 111 ರನ್ ಕಲೆ ಹಾಕಿತು.ಭಾರತದ ಆರಂಭಿಕ ಆಟಗಾರ್ತಿ ಹಾರ್ಲೀನ್ ಡಿಯೋಲ್ (14), ಸ್ಮೃತಿ ಮಂದಾನ (12) ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ. ಭರವಸೆಯ ಆಟಗಾರ್ತಿ ಜಾಮೀಮ್ ರೊಡ್ರಿಗಸ್ 2 ರನ್ ಗಳಿಗೆ ಆಟ ಮುಗಿಸಿದರು.
ಮಿಥಾಲಿ ರಾಜ್ (20), ದೀಪ್ತಿ ಶರ್ಮಾ (18) ತಂಡಕ್ಕೆ ಉತ್ತಮ ಕಾಣಿಕೆ ಸೂಚನೆ ನೀಡಿದರು. ಆದರೆ ಇಲ್ಲದ ರನ್ ಕದಿಯಲು ಹೋಗಿ ದೀಪ್ತಿ ಔಟ್ ಆದರು. ಶಿಖಾ ಪಾಂಡೆ (18) ಆಸರೆಯಾಗಲಿಲ್ಲ. ಕೆಳ ಕ್ರಮಾಂಕದ ಆಟಗಾರ್ತಿಯರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಕಲೆ ಹಾಕಿತು.
ಈ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 19.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 114 ರನ್ ಕಲೆ ಹಾಕಿ ಗೆಲುವು ದಾಖಲಿಸಿತು. ಐದನೇ ವಿಕೆಟ್ ಗೆ ಹೀದರ್ ನೈಟ್ (29) ಹಾಗೂ ಡೇನಿಯಲ್ ವ್ಯಾಟ್ ತಂಡಕ್ಕೆ ಅರ್ಧಶತಕ ಕಾಣಿಕೆ ನೀಡಿದರು.ಡೇನಿಯಲ್ ವ್ಯಾಟ್ 55 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 64 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಭಾರತದ ಪರ ಏಕ್ತಾ ಬಿಷ್ಟ್ ಎರಡು ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್:ಭಾರತ 20 ಓವರ್ ಗಳಲ್ಲಿ 8 ವಿಕೆಟ್ ಗೆ 111, ಇಂಗ್ಲೆಂಡ್ 19.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 114