ಚೆನ್ನೈ: ತೀವ್ರ ನಿರೀಕ್ಷೆ ಕೆರಳಿಸಿದ್ದ ಐಪಿಎಲ್ 2019 ಟೂರ್ನಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಸುರೇಶ್ ರೈನಾ ಮುಖಾಂತರ ದಾಖಲೆಯೊಂದು ನಿರ್ಮಾಣವಾಗಿದೆ.
ಹೌದು.. ಐಪಿಎಲ್ ಇತಿಹಾಸದಲ್ಲೇ ಬ್ಯಾಟ್ಸಮನ್ ಓರ್ವ ಐದು ಸಾವಿರ ರನ್ ಗಳಿಸಿದ ಕೀರ್ತಿಗೆ ಸುರೇಶ್ ರೈನಾ ಪಾತ್ರರಾಗಿದ್ದಾರೆ. ನಿನ್ನೆ ಚೆನ್ನೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ನಡೆದ ಉದ್ಘಾಟನಾ ಪಂದ್ಯದಲ್ಲಿ 21 ಎಸೆತದಲ್ಲಿ 19 ರನ್ ಗಳಿಸಿದರು. ಈ ಮೂಲಕ ಐಪಿಎಲ್ ನಲ್ಲಿ ತಮ್ಮ ರನ್ ಗಳಿಕೆಯನ್ನು ರೈನಾ 5 ಸಾವಿರಕ್ಕೆ ಏರಿಕೆ ಮಾಡಿಕೊಂಡರು. ಉದ್ಘಾಟನಾ ಪಂದ್ಯ ಸೇರಿ ಒಟ್ಟು 173 ಇನ್ನಿಂಗ್ಸ್ ಗಳಲ್ಲಿ ರೈನಾ 5,004 ರನ್ ಗಳಿಕೆ ಸಾಧನೆ ಮಾಡಿದ್ದಾರೆ.
ಇನ್ನು ನಿನ್ನೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಚೆನ್ನೈ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.