ನವದೆಹಲಿ: ಡ್ಯಾನ್ಸ್ ಮತ್ತು ಹಾಡುಗಳಿಂದ ಪ್ರೇಕ್ಷಕರ ಮನ ಗೆಲ್ಲುವ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ತಂಡದ ಆಟಗಾರ ಡ್ವೆನ್ ಬ್ರಾವೋ ಅವರು, ಸಿಎಸ್ ಕೆ ದಲ್ಲಿ 60 ವರ್ಷದ ಮುದುಕರಿಲ್ಲ, 32-35 ವರ್ಷದ ಯುವಕರಿದ್ದಾರೆ ಎಂದು ಹೇಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ರಾತ್ರಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೂರು ವಿಕೆಟುಗಳನ್ನು ಪಡೆಯುವ ಮೂಲಕ ಸಿಎಸ್ ಕೆ ಗೆಲುವಿಗೆ ಕಾರಣರಾಗಿದ್ದ ಡ್ವೇನ್ ಬ್ರಾವೋ, ವಿಕೆಟ್ ಕಬಳಿಸಿದಾಗ ತಮ್ಮ ಎಂದಿನ ಡಿಜೆ ಶೈಲಿಯಲ್ಲಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು.
ನಮಗೆ ನಮ್ಮ ವಯಸ್ಸಿನ ಬಗ್ಗೆ ಅರಿವಿದೆ. ಈ ಕುರಿತು ನೀವು ಗೂಗಲ್ ಮಾಡಬಹುದು. ನಾವು 60 ವರ್ಷದ ಮುದುಕರಲ್ಲ. ನಾವು 32 ರಿಂದ 35 ವರ್ಷದವರು ಅಷ್ಟೆ. ನಾವು ಈಗಲೂ ಯುವಕರು ಮತ್ತು ನಮಗೆ ಸಾಕಷ್ಟು ಅನುಭವವಿದೆ ಎಂದು ಬ್ರಾವೋ ಹೇಳಿದ್ದಾರೆ.
ವಿಶ್ವದ ಅತ್ಯುತ್ತಮ ನಾಯಕ(ಧೋನಿ)ನ ನೇತೃತ್ವದಲ್ಲಿ ನಾವು ಆಟವಾಡುತ್ತಿದ್ದು, ನಮಗೆ ನಮ್ಮ ದೌರ್ಬಲ್ಯ ಏನು ಅಂತ ಗೊತ್ತು. ಅದನ್ನು ಸರಿಪಡಿಸಿಕೊಂಡು ಉತ್ತಮ ಆಡವಾಡುತ್ತೇವೆ ಎಂದರು.
ನಮ್ಮದು ವೇಗದ ತಂಡ ಅಲ್ಲ. ಆದರೆ ಉತ್ತಮ ತಂಡ ಎಂದು ವೆಸ್ಟ್‌ಇಂಡೀಸ್‌ನ ಜನಪ್ರಿಯ ಆಟಗಾರ ಡ್ವೇನ್ ಬ್ರಾವೋ ಹೇಳಿದ್ದಾರೆ.
ಬ್ಯಾಟಿಂಗ್ ಗೆ ಸಂಬಂಧಿದಂತೆ ಧೋನಿ ಯಾವ ರೀತಿ ತಂತ್ರ ರೂಪಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಾವೋ, ನಾವು ಯಾವುದೇ ಯೋಜನೆ ರೂಪಿಸುವುದಿಲ್ಲ ಮತ್ತು ತಂಡದ ಸಭೆ ಸಹ ನಡೆಸುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಆಟವಾಡುತ್ತೇವೆ. ಎಂಎಸ್ ಧೋನಿ ಸೇರಿದಂತೆ ಪ್ರತಿ ಆಟಗಾರರಿಗೂ ಅವರದ್ದೇಯಾದ ಶೈಲಿ ಇರುತ್ತದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos