ನವದೆಹಲಿ: ಯೂನಿವರ್ಸ್ ಬಾಸ್ ಎಂದು ಹೇಳಿಕೊಳ್ಳುವ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡ್ತಾರಂತೆ. ಸೋನಿಯಾ ಗಾಂಧಿ ಕ್ಷೇತ್ರ ರಾಯ್ ಬರೇಲಿಯಲ್ಲೇ ಬಿಜೆಪಿ ಸ್ಟಾರ್ ಪ್ರಚಾರಕರಾಗಿ ತಿರುಗಾಡಲಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
2019ರ ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಕ್ರಿಸ್ ಗೇಯ್ಲ್ ಅವರು ಕೇಸರಿ ಕುರ್ತಾ, ಹಣೆ ಮೇಲೆ ತಿಲಕವಿಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇನ್ನು ಗೇಯ್ಲ್ 2018ರ ಏಪ್ರಿಲ್ ನಲ್ಲಿಯೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೇಯ್ಲ್ ಆಗಿದ್ದವರು ಈಗ ಕೃಷ್ಣ ಗೋಯಲ್ ಅಂತಾ ಹೆಸರು ಬದಲಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಟಾರ್ ಪ್ರಚಾರಕರಾಗಿದ್ದಾರೆ ಎನ್ನಲಾಗಿದೆ.
ಆದರೆ ಅಸಲಿಗೆ ಗೇಯ್ಲ್ ಬಿಜೆಪಿಗೆ ಸೇರಿಲ್ಲ. ತಿಲಕವನ್ನೂ ಇಟ್ಟುಕೊಂಡಿಲ್ಲ. ಯಾವುದೇ ಪಕ್ಷದ ಪರವಾಗಿ ಪ್ರಚಾರವನ್ನು ಮಾಡುತ್ತಿಲ್ಲ. ಆದರೆ 2018ರ ಏಪ್ರಿಲ್ ನಲ್ಲಿ ಮನ್ಯಾವರ್ ಬ್ರ್ಯಾಂಡ್ ಜಾಹೀರಾತಿನಲ್ಲಿ ಗೇಯ್ಲ್ ಕಾಣಿಸಿಕೊಂಡಿದ್ದರು. ಇದೇ ಫೋಟೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics