ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಫಸ್ಟ್ ಕ್ವಾಲಿಫೈಯರ್: ಚಿನ್ನೈ ಕೋಟೆಯನ್ನು ಛಿದ್ರಗೊಳಿಸಿದ ಮುಂಬೈ ಫೈನಲ್‌ಗೆ ಲಗ್ಗೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬಗ್ಗು ಬಡಿದ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದೆ

ಫಸ್ಟ್ ಕ್ವಾಲಿಫೈಯರ್: ಚಿನ್ನೈ ಕೋಟೆಯನ್ನು ಛಿದ್ರಗೊಳಿಸಿದ ಮುಂಬೈ ಫೈನಲ್‌ಗೆ ಲಗ್ಗೆ
Raghavendra Adiga
Updated On : 7 May 2019, 11:36 am

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಬಗ್ಗು ಬಡಿದ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಿಸಿದೆ. ಚೆನ್ನೈ ವಿರುದ್ಧ ಮುಂಬೈ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ತವರಿನಲ್ಲೇ ಧೋನಿ ಪಡೆಯನ್ನು ಸೋಲಿನ ದವಡೆಗೆ ತಳ್ಲಿದೆ.

ಚೆನ್ನೈನ ಎಂಎ ಚ್ದಂಬರಂ ಸ್ಟೇಡಿಯಂ ನಲ್ಲಿ ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಪ್ರಾರಂಭದಲ್ಲಿ ಫೀಲ್ಡ್ ಗಿಳಿದ ಫಾಫ್ ಡು ಪ್ಲೆಸಿಸ್ (6), ಶೇನ್ ವಾಟ್ಸನ್ (10) ಹಾಗೂ ಸುರೇಶ್ ರೈನಾ (5) ಒಬ್ಬರ ಹಿಂದೊಬ್ಬರು ಪೆವಿಲಿಯನ್ ಸೇರಿದ್ದರು. 
ಈ ನಂತರ ಬಂದ ಅಂಬಟಿ ರಾಯಡು(42*) ಮತ್ತು  ಮುರಳಿ ವಿಜಯ್ (26) ತಂಡಕ್ಕೆ ಆಗಬಹುದಾಗಿದ್ದ ಬಾರೀ ಹಿನ್ನಡೆಯನ್ನು ತಗ್ಗಿಸಿದ್ದರು.

Advertisement

Advertisement


ಇದರೊಡನೆ ವಿಜಯ್ ಮರಳಿದ ಬಳಿಕ ರಾಯಡುಗೆ ಜತೆಯಾದ ನಾಯಕ ಎಂ.ಎಸ್. ಧೋನಿ 3 ಸಿಕ್ಸರ್ ನೆರವಿನೊಂದಿಗೆ 29 ಎಸೆತದಲ್ಲಿ 37 ರನ್ ಗಳಿಸಿ ಅಜೇಯರಾಗಿ ಉಳಿದರು. 

ಹೀಗೆ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಮುಂಬೈ ಪರ ರಾಹುಲ್ ಚಹಾರ್ 131 ವಿಕೆಟ್ ಪಡೆದು ಮಿಂಚಿದರು.

ಬಳಿಕ ಚೆನ್ನೈ ನೀಡಿದ್ದ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಪಡೆಯ ಆರಂಬ ಸಹ ಅಷ್ಟೇನೂ ಉತ್ತಮವಾಗಿರಲಿಲ್ಲ. ನಾಯಕ  ರೋಹಿತ್ ಶರ್ಮಾ (2) ಹಾಗೂ ಕ್ವಿಂಟನ್ ಡಿ ಕಾಕ್ (8)  ರನ್ ಗಳಿಸಿ ಔಟಾಗುವ ಮೂಲಕ ನಿರಾಶೆ ಮೂಡಿಸಿದ್ದರು.

ಆ ನಂತರ ಬಂದ ಸೂರ್ಯ ಕುಮಾರ್ ಯಾದವ್ (71*)ಹಾಗೂ ಇಶಾನ್ ಕಿಶಾನ್ (28)  ಉತ್ತಮ ಜತೆಯಾಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು.

ಸೂರ್ಯ ಕುಮಾರ್ ತಾವು 10 ಬೌಂಡರಿ, ನೆರವಿನಿಂದ 54 ಎಸೆತದಲ್ಲಿ 71 ರನ್ ಗಳಿಸಿ ಸಾಧನೆ ತೋರಿದರು. ಇತ್ತ ಇಶಾನ್  ವಿಕೆಟ್ ಒಪ್ಪಿಸಿದ ಬಳಿಕ ಆಗಮಿಸಿದ ಕೃನಾಲ್ ಪಾಂಡ್ಯ ಶೂನ್ಯಕ್ಕೆ ಔಟಾದರೆ ಹಾರ್ದಿಕ್ ಪ್ಂಆಡ್ಯ 11 ಎಸೆತಗಳಿಗೆ 13 ರನ್ ಸಿಡಿಸಿ ಅಜೇಯರಾಗಿ ಉಳಿದರು.

ಚೆನ್ನೈನ ದೀಪಕ್ ಚಹರ್ ಹಾಗೂ ಹರ್ಭಜನ್ ಸಿಂಗ್  ತಲಾ ಒಂದೊಂದು ವಿಕೆಟ್ ಪಡೆದರೆ ಇಮ್ರಾನ್ ತಹೀರ್ 2 ವಿಕೆಟ್ ಕಿತ್ತರು.

ಈ ಗೆಲುವಿನೊಡನೆ ಮುಂಬೈ ಐಪಿಎಲ್ ನಲ್ಲಿ ಐದನೇ ಬಾರಿಗೆ ಫೈನಲ್ ಪ್ರವೇಶಿಸಿ ದಾಖಲೆ ಮಾಡಿದೆ. ಅತ್ತ ಚೆನ್ನೈ ಸಹ ಇನ್ನೊಂದು ಅವಕಾಶ ಪಡೆಯಲಿದ್ದು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ವಿಜೇತ  ತಂಡವನ್ನು ಎದುರಿಸಬೇಕಿದೆ. 

ನಾಳಿನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸವಾಲೆಸೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments