ಕ್ರಿಕೆಟ್

ಅಫ್ರಿದಿ ಹಲವು ಕ್ರಿಕೆಟಿಗರ ವೃತ್ತಿ ಜೀವನ ಹಾಳು ಮಾಡಿದ್ದಾರಾ? ಇಮ್ರಾನ್‌ ಫರಾತ್‌ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

Nagaraja AB

ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಲೋಕಸಭಾ ಅಭ್ಯರ್ಥಿ ಗೌತಮ್ ಗಂಭೀರ್ ಅವರ ಬಗ್ಗೆ ಟೀಕೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಕುರಿತು ಪಾಕ್‌ ಕ್ರಿಕೆಟಿಗ ಇಮ್ರಾನ್‌ ಫರಾತ್‌ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇತ್ತೀಚಿಗಷ್ಟೆ ಲೋಕಾರ್ಪಣೆಗೊಂಡಿದ್ದ "ಗೇಮ್‌ ಚೇಂಜರ್‌" ಪುಸ್ತಕದಲ್ಲಿ ಅಫ್ರಿದಿ ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಾದ ಹಲವು ಅನುಭವಗಳನ್ನು ಹಂಚಿಕೊಂಡಿದ್ದರು. ಗೌತಮ್‌ ಗಂಭಿರ್‌ ಅವರಿಗೆ ವ್ಯಕ್ತಿತ್ವ ಸರಿಯಿಲ್ಲ ಎಂದು ಅಫ್ರಿದಿ ಜರಿದಿದ್ದರು. ಈ ವಿಷಯದ ಕುರಿತಂತೆ ಟ್ವಿಟರ್‌ನಲ್ಲಿ ಮಾಜಿ ಕ್ರಿಕೆಟಿಗರ ನಡುವೆ ವಾಕ್ಸಮರ ಉಂಟಾಗಿತ್ತು.

ಅಫ್ರಿದಿಯೊಂದಿಗೆ ಹೆಚ್ಚು ಕಾಲ ಕ್ರಿಕೆಟ್‌ ಆಡಿದ ಅನುಭವ ಹೊಂದಿರುವ ಪಾಕಿಸ್ತಾನ  ತಂಡದ ಅವಕೃಪೆ ಎದುರಿಸುತ್ತಿರುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಇಮ್ರಾನ್‌ ಫರಾತ್‌,  ಮಾಜಿ ಆಲ್‌ರೌಂಡರ್‌ನ ವ್ಯಕ್ತಿತ್ವದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಫ್ರಿದಿ ತಮ್ಮ ಸ್ವಾರ್ಥಕ್ಕಾಗಿ  ಹಲವು ಕ್ರಿಕೆಟಿಗರ ವೃತ್ತಿ  ಬದುಕನ್ನು ಹಾಳು ಮಾಡಿದ್ದಾರೆ ಹಾಗೂ ಅವರೊಬ್ಬ ಸ್ವಾರ್ಥಿ ಎಂದು ಆರೋಪಿಸಿದ್ದಾರೆ.

ಸಾಲು ಸಾಲು ಟ್ವೀಟ್‌ಗಳ ಮೂಲಕ ಅಫ್ರಿದಿಯನ್ನು ಜರಿದಿರುವ 36 ವರ್ಷದ ಎಡಗೈ  ಬ್ಯಾಟ್ಸ್‌ಮನ್‌ ಫರಾತ್‌, ಸತತ 20 ವರ್ಷಗಳ ಕಾಲ ತಮ್ಮ ವಯಸ್ಸಿನ ಕುರಿತಾಗಿ ಸುಳ್ಳು  ಹೇಳುತ್ತಾ ಬಂದ ವ್ಯಕ್ತಿಗೆ ನಾಚಿಕೆಯಾಗಬೇಕು. ಇಂತಹ ವ್ಯಕ್ತಿ ಪಾಕ್‌ನ ದಿಗ್ಗಜ  ಆಟಗಾರರನ್ನು ಹೆಸರಿಸಿ ಅವರ ವಿರುದ್ಧ ಟೀಕೆ ಮಾಡುತ್ತಿದ್ದಾನೆ ಎಂದು ಕುಟುಕಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಹಾಗೂ ದಿಗ್ಗಜ ಆಟಗಾರರಾದ  ಜಾವೆದ್‌ ಮಿಯಾಂದಾದ್‌ ಮತ್ತು ವಕಾರ್‌ ಯೂನಿಸ್‌ ಅವರನ್ನೂ ಅಫ್ರಿದಿ ತಮ್ಮ ಪುಸ್ತಕದಲ್ಲಿ  ಬಹುವಾಗಿ ಟೀಕಿಸಿದ್ದಾರೆ.

"ಅಫ್ರಿದಿ ಅವರ ಹೊಸ ಪುಸ್ತಕದ ಬಗ್ಗೆ ಕೇಳಿ ಮತ್ತು ಓದಿದ ಬಳಿಕ ನನಗೇ  ನಾಚಿಕೆಯಾಗುತ್ತಿದೆ. ತಮ್ಮ ವಯಸ್ಸಿನ ಕುರಿತಾಗಿ 20 ವರ್ಷ ಸುಳ್ಳು ಹೇಳಿದ ವ್ಯಕ್ತಿ ಇದೀಗ  ಎಲ್ಲವನ್ನೂ ಸ್ಪಷ್ಟಪಡಿಸಲು ಮುಂದಾಗಿದ್ದು, ಪಾಕಿಸ್ತಾನದ ದಿಗ್ಗಜ ಆಟಗಾರರನ್ನು  ಟೀಕಿಸುತ್ತಿದ್ದಾನೆ'' ಎಂದು ಫರಾತ್‌ ತಮಮ್ ಟ್ವೀಟ್‌ ನಲ್ಲಿ ಕಿಡಿ ಕಾರಿದ್ದಾರೆ.

ಮಾಜಿ ಕ್ರಿಕೆಟಿಗರನ್ನು ದೂಶಿಸುತ್ತಿರುವ ಅಫ್ರಿದಿ ಅವರ ಬಗ್ಗೆ ಹೇಳಲು ಹೊರಟರೆ  ಸಾಕಷ್ಟಿದೆ ಎಂದಿರುವ ಫರಾತ್‌, "ಈ ವ್ಯಕ್ತಿಯ ಕುರಿತಾಗಿ ಹೇಳುವುದಾದರೆ ನನ್ನ ಬಳಿ  ಸಾಕಷ್ಟು ಕಥೆಗಳಿವೆ. ಅವರ ಜೊತೆ ಆಟವಾಡಿದ ಅನುಭವವಿದೆ. ಅವರಿಗೆ ಉತ್ತಮ ರಾಜಕರಣಿ ಆಗುವ  ಪ್ರತಿಭೆ ಇದೆ'' ಎಂದು ವ್ಯಂಗ್ಯವಾಡಿದ್ದಾರೆ.

"ಅಂದಹಾಗೆ ನನ್ನ ಬಳಿ ಈ ವ್ಯಕ್ತಿಯ ಕುರಿತಾಗಿ ಹೇಳಲು ಇರುವ ಕಥೆ ಕಡಿಮೆಯೇ. ಇನ್ನು ಅವರ  ಪುಸ್ತಕದಲ್ಲಿ ಹೆಸರಿಸಿರುವ ಮಾಜಿ ಆಟಗಾರರೆಲ್ಲ ಈಗಲೇ ಮಾತನಾಡಿ ಒಬ್ಬ ಸ್ವಾರ್ಥ ತುಂಬಿದ  ಆಟಗಾರನ ಕುರಿತು ಸತ್ಯಾಂಶ ಏನೆಂಬುದನ್ನು ಬಹಿರಂಗ ಪಡಿಸಬೇಕಾಗಿ ವಿನಂತಿಸುತ್ತೇನೆ. ಆತ  ತನ್ನ ಒಳಿತಿಗಾಗಿ ಹಲವು ಕ್ರಿಕೆಟಿಗರ ವೃತ್ತಿ ಬದುಕನ್ನು ಹಾಳುಮಾಡಿದ,'' ಎಂದು ಫರಾತ್‌  ತಮ್ಮ ಟ್ವೀಟ್‌ಗಳಲ್ಲಿ ಅಫ್ರಿದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪುಸ್ತಕ ಮುದ್ರಣ ತಡೆಗೆ ಅರ್ಜಿ  ಅಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ಹೆಸರಿಸಿರುವ ಕ್ರಿಕೆಟಿಗರೆಲ್ಲರೂ ಈ ಕೂಡಲೇ ಅವರಿಗೆ  ತಕ್ಕ ಉತ್ತರ ನೀಡಬೇಕಿದೆ ಎಂದು ಇಮ್ರಾನ್‌ ಫರಾತ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

SCROLL FOR NEXT