ಇಮ್ರಾನ್ ತಾಹಿರ್ 
ಕ್ರಿಕೆಟ್

ಮೊದಲ ಓವರ್‌ನಲ್ಲೇ ಬೈರ್‌ ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿ ಮೈದಾನದಲ್ಲೆಲ್ಲಾ ಓಡಾಡಿದ ತಾಹೀರ್, ವಿಡಿಯೋ!

ವಿಶ್ವಕಪ್‌ನ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ್ದು ಅಲ್ಲದೆ ಎರಡನೇ ಎಸೆತದಲ್ಲೇ ಜಾನಿ ಬೈರ್‌ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್...

ಲಂಡನ್: ವಿಶ್ವಕಪ್‌ನ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ್ದು ಅಲ್ಲದೆ ಎರಡನೇ ಎಸೆತದಲ್ಲೇ ಜಾನಿ ಬೈರ್‌ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ ಮೈದಾನದಲ್ಲೆಲ್ಲಾ ಓಡಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಂಡಿದ್ದು ಮೊದಲ ಪಂದ್ಯ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಗೆ ಎರಡನೇ ಎಸೆತದಲ್ಲಿ ಜಾನಿ ಬೈರ್‌ಸ್ಟೋವ್‌ರನ್ನು ಡಕೌಟ್ ಆಗಿರುವುದು ಕೊಂಚ ಹಿನ್ನಡೆಯಾಗಿದೆ.
ವಿಶ್ವಕಪ್ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ ಖ್ಯಾತಿಗೆ ಇಮ್ರಾನ್ ತಾಹಿರ್ ಭಾಜನರಾಗಿದ್ದು ಅಲ್ಲದೆ ವಿಕೆಟ್ ಸಹ ಪಡೆದಿರುವುದು ಸಾಧನೆ ಸರಿ. 
ಸದ್ಯ ಇಂಗ್ಲೆಂಡ್ ತಂಡ 40 ಓವರ್ ಮುಕ್ತಾಯದ ವೇಳೆಗೆ 4 ವಿಕೆಟ್ ನಷ್ಟಕ್ಕೆ 235 ರನ್ ಪೇರಿಸಿದೆ. ದಕ್ಷಿಣ ಆಫ್ರಿಕಾ ಪರ ಇಮ್ರಾನ್ ತಾಹಿರ್ 2, ರಬಾಡ ಮತ್ತು ಫೆಹ್ಲುಕ್ವೇವೊ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ

ಶಿಕ್ಷಕರ ಕೊರತೆ ಎಂದು ದೂರಿದ್ದೇ ತಪ್ಪಾಯ್ತು ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತು!

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ