ರಾಜ್ ಕೋಟ್: ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ನಡೆಯಲಿರುವ ಎರಡನೇ ಟಿ-20 ಪಂದ್ಯ ಇಲ್ಲಿ ನಡೆಯಲಿದ್ದು, ಪಂದ್ಯಕ್ಕೆ ಮಹಾ ಚಂಡಮಾರುತದ ಭೀತಿ ಎದುರಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಚಂಡಮಾರುತವು ರಾಜ್‌ಕೋಟ್‌ನಲ್ಲಿ ಗುರುವಾರ ನಡೆಯಲಿರುವ ಎರಡನೇ ಪಂದ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.
ನವೆಂಬರ್ 6 ರಂದು ಮಹಾ ಕರಾವಳಿ ಪ್ರವೇಶಿಸಿ ಗುಜರಾತ್‌ಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಎರಡನೇ ಟಿ 20 ಪಂದ್ಯದ ದಿನವಾದ ನವೆಂಬರ್ 7 ರಂದು ರಾಜ್ಯಕ್ಕೆ ಭಾರಿ ಮಳೆಯಾಗಬಹುದು. ಆದಾಗ್ಯೂ, ಹವಾಮಾನ ಇಲಾಖೆಯ ಪ್ರಕಾರ, ನವೆಂಬರ್ 5 ರ ಬೆಳಿಗ್ಗೆ ಚಂಡಮಾರುತ ತೀವ್ರವಾಗಿರುತ್ತದೆ ಮತ್ತು ಕ್ರಮೇಣ ದುರ್ಬಲಗೊಳ್ಳುತ್ತದೆ ಎಂದು ತಿಳಿಸಿದೆ.