ಕ್ರಿಕೆಟ್

ಬಾಂಗ್ಲಾದ ನಾಗಿನ್ ಡ್ಯಾನ್ಸ್‌ಗೆ 'ಪುಂಗಿ' ಊದಿದಾ ಚಹಾರ್ ಹ್ಯಾಟ್ರಿಕ್ ವಿಕೆಟ್ ಮತ್ತು ಶ್ರೇಯಸ್ ಹ್ಯಾಟ್ರಿಕ್ ಸಿಕ್ಸ್, ವಿಡಿಯೋ ವೈರಲ್!

Vishwanath S

ಟೀಂ ಇಂಡಿಯಾ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತದ ನೆಲದಲ್ಲಿ ಪುಂಗಿ ಊದಲು ಬಾಂಗ್ಲಾದೇಶ ದೇಶ ರೆಡಿಯಾಗಿತ್ತು. ಆದರೆ ಅದಕ್ಕೆ ಹೊಡೆತ ಕೊಟ್ಟಿದ್ದೆ ಚಹಾರ್ ಹ್ಯಾಟ್ರಿಕ್ ಸಿಕ್ಸ್ ಮತ್ತು ಶ್ರೇಯಸ್ ಅಯ್ಯರ್ ಅವರ ಹ್ಯಾಟ್ರಿಕ್ ಸಿಕ್ಸ್ ಗಳು. ಈ ಇಬ್ಬರು ಆಟಗಾರರು ಪಡೆದ ಹ್ಯಾಟ್ರಿಕ್ ವಿಕೆಟ್ ಮತ್ತು ಹ್ಯಾಟ್ರಿಕ್ ಸಿಕ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಟೀಂ ಇಂಡಿಯಾ ಗೆಲುವಿನಲ್ಲಿ ವೇಗಿ ದೀಪಕ್ ಚಹರ್ ಹ್ಯಾಟ್ರಿಕ್ ವಿಕೆಟ್ ಪಡೆದು ಪ್ರಮುಖ ಪಾತ್ರ ನಿರ್ವಹಿಸಿದರು. ದೀಪಕ್‌ ಚಾಹರ್‌ (3.2–0–7–6) ಹ್ಯಾಟ್ರಿಕ್‌ ಸಹಿತ ವಿಶ್ವದಾಖಲೆಯ ಬೌಲಿಂಗ್‌ ಪ್ರದರ್ಶನ ನೀಡಿದರು. 

ಇನ್ನು ಇದೇ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ 33 ಎಸೆತಗಳಲ್ಲಿ 62 ರನ್ ಬಾರಿಸಿದ್ದರು. 3 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದ್ದರು. ಒಂದೇ ಓವರ್ ನಲ್ಲಿ ಶ್ರೇಯಸ್ ಹ್ಯಾಟ್ರಿಕ್ ಸಿಕ್ಸ್ ಸಹ ಬಾರಿಸಿದ್ದರು. 

ಈ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ 30 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿ, ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. 

SCROLL FOR NEXT