ಕ್ರಿಕೆಟ್

ಮಹಿಳಾ ಟಿ20 ವೆಸ್ಟ್ ಇಂಡೀಸ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ

Raghavendra Adiga

ಪ್ರಾವಿಡೆನ್ಸ್ (ಗಯಾನಾ): ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ 20 ಯಲ್ಲಿ ಟೀಂ ಇಂಡಿಯಾ ವನಿತೆಯರು  ವೆಸ್ಟ್ ಇಂಡೀಸ್ ವಿರುದ್ಧ ಏಳು ವಿಕೆಟ್ ಗಳ ಜಯ ಗಳಿಸಿದ್ದಾರೆ. ಈ ಮೂಲಕ ಉಭಯ ತಂಡಗಳ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಗೊತ್ತುಪಡಿಸಿದ 20 ಓವರ್‌ಗಳಲ್ಲಿ ಒಟ್ಟು 59/9 ಅಲ್ಪಮೊತ್ತವನ್ನಷ್ಟೇ ಕಲೆ ಹಾಕಿದೆ. ಇದನ್ನು ಬೆನ್ನತ್ತಿದ ಭಾರತ ವನಿತೆಯರು 16.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿದ್ದಾರೆ.

ಭಾರತೀಯ ಆಟಗಾರ್ತಿಯರ ಪರ  ಜೆಮಿಮಾ ರೊಡ್ರಿಗಸ್ ಅಜೇಯ 40 ರನ್ ಗಳಿಸಿದರು.

ಪ್ರಾರಂಭದಲ್ಲೇ ವಿಕೆಟ್ ಪತನದಿಂದ ಕಂಗಾಲಾದ ಅತಿಥೇಯ ವೆಸ್ಟ್ ಇಂಡೀಸ್ ಉತ್ತಮ ಆಟ ಪ್ರದರ್ಶಿಸಲು ಇನ್ನೊಮ್ಮೆ ವಿಫಲವಾಗಿದೆ. ತಂಡವು ಮೊದಲ ಹತ್ತು ಓವರ್ ಮುಗಿಯುವ ವೇಳೆಗೆ 27/3 ರನ್ ಗಳಿಸಿತ್ತು. ಅತಿಥೇಯರ ಪರ . ಚಿನೆಲ್ಲೆ ಹೆನ್ರಿ 18 ಎಸೆತಗಳಲ್ಲಿ 11 ರನ್ ಗಳಿಸಿದರೆ, ಚೆಡಿಯನ್ ನೇಷನ್ 27 ಎಸೆತಗಳಲ್ಲಿ  11 ರನ್ ಗಳಿಸಿದರು. ಭಾರತ ಪರ  ರಾಧಾ ಯಾದವ್ ನಾಲ್ಕು ಓವರ್‌ಗಳಲ್ಲಿ 2/6, ಮತ್ತು ದೀಪ್ತಿ ಶರ್ಮಾ  2/12. ವಿಕೆಟ್ ಕಿತ್ತು ಸಂಭ್ರಮಿಸಿದ್ದಾರೆ.

ಇನ್ನು ಮೂರು ವಿಕೆಟ್‌ಗಳ ನಷ್ಟದ ಹೊರತಾಗಿಯೂ ಭಾರತೀಯ ವನಿತೆಯರು 16.4 ಓವರ್ ನಲ್ಲಿ 60 ರನ್ ಕಲೆಹಾಕಿ ಸುಲಭವಾಗಿ ಗುರಿ ಮುಟ್ಟಿದ್ದರು. 

ಈ ಗೆಲುವಿನೊಡನೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನೆಲದಲ್ಲಿ ಟಿ ಟ್ವೆಂಟಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇನ್ನುಳಿದಂತೆ ಎರಡು ಪಂದ್ಯಗಳಿದ್ದು ಅವು ಕ್ರಮವಾಗಿ  ನವೆಂಬರ್ 17 ಹಾಗೂ  ನವೆಂಬರ್ 20 ರಂದು ನಡೆಯಲಿದೆ. ಎರಡೂ ಪಂದ್ಯಗಳು ಪ್ರಾವಿಡೆನ್ಸ್‌ನಲ್ಲಿ ನಡೆಯಲಿದೆ.

SCROLL FOR NEXT