ಫರ್ಗೂಸನ್ 
ಕ್ರಿಕೆಟ್

ವಿಶ್ವಕಪ್‍ನಲ್ಲಿ ತಂಡದ ಪ್ರದರ್ಶನ ಮುಂದಿನ ತಲೆಮಾರಿಗೆ ಸ್ಫೂರ್ತಿ: ಫರ್ಗೂಸನ್ 

ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ನ್ಯೂಜಿಲೆಂಡ್ ವಿಫಲವಾಗಿರಬಹುದು. ಆದರೆ, ಫೈನಲ್ ಪಂದ್ಯದಲ್ಲಿ ತಂಡದ ಪ್ರದರ್ಶನವು ಮುಂದಿನ ತಲೆಮಾರಿನ ಬ್ಲ್ಯಾಕ್ ಕ್ಯಾಪ್ಸ್ ಆಟಗಾರರಿಗೆ  ಸ್ಫೂರ್ತಿ ತುಂಬಲಿದೆ ಎಂದು ಕಿವೀಸ್ ವೇಗಿ ಲೂಕಿ ಫರ್ಗುಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದುಬೈ: ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ನ್ಯೂಜಿಲೆಂಡ್ ವಿಫಲವಾಗಿರಬಹುದು. ಆದರೆ, ಫೈನಲ್ ಪಂದ್ಯದಲ್ಲಿ ತಂಡದ ಪ್ರದರ್ಶನವು ಮುಂದಿನ ತಲೆಮಾರಿನ ಬ್ಲ್ಯಾಕ್ ಕ್ಯಾಪ್ಸ್ ಆಟಗಾರರಿಗೆ  ಸ್ಫೂರ್ತಿ ತುಂಬಲಿದೆ ಎಂದು ಕಿವೀಸ್ ವೇಗಿ ಲೂಕಿ ಫರ್ಗುಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಕಳೆದ ಜುಲೈನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ರೋಚಕತೆ ಕೆರಳಿಸಿತ್ತು. ಈ ಪಂದ್ಯದಲ್ಲಿ ನಿಗದಿತ 50 ಓವರ್‍ಗಳಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ಪ್ರದರ್ಶನ ಸಮಬಲವಾಗಿತ್ತು. ಅಲ್ಲದೇ, ಸೂಪರ್ ಓವರ್‍ನಲ್ಲೂ ಪಂದ್ಯ ಟೈ ಆಗಿತ್ತು. ಆದರೆ, ಬೌಂಡರಿ ನಿಯಮದ ಆಧಾರದಲ್ಲಿ ಆಂಗ್ಲರಿಗೆ ಚಾಂಪಿಯನ್ ಪಟ್ಟ ನೀಡಲಾಗಿತ್ತು.

ಭವಿಷ್ಯದ ದಿನಗಳಲ್ಲಿ ತಂಡ ಬಲಿಷ್ಟವಾಗಲು ಇಂಥ ಪಂದ್ಯಗಳು ನಿಜಕ್ಕೂ ಮಾದರಿಯಾಗಲಿದೆ.ಟೂರ್ನಿಯುದ್ದಕ್ಕೂ ನ್ಯೂಜಿಲೆಂಡ್ ಹಲವು ಏಳು ಬೀಳುಗಳನ್ನು ಕಂಡಿತ್ತು. ಒಂದು ಹಂತದಲ್ಲಿ ತಂಡ ಸೆಮಿಫೈನಲ್ ಹಾದಿ ಕಠಿಣವಾಗಿತ್ತು.ಆದರೂ, ತಂಡದ ಆಟಗಾರರು ಅಗತ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದರು.ಇದು ಫೈನಲ್‍ಗೇರಲು ಸಹಾಯವಾಗಿತ್ತು. ಇದು ಮುಂದಿನ ತಲೆಮಾರಿನ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಖಂಡಿತ ಮಾದರಿಯಾಗಲಿದೆ ಎಂದು ಫರ್ಗೂಸನ್ ನುಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT