ವಡೋದರ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಾನಿಯಾ ಭಾಟಿಯಾ ಅವರು ಎಂಎಸ್ ಧೋನಿ ರೀತಿ ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಬಿಸ್ತಾ ಬೌಲಿಂಗ್ ನಲ್ಲಿ ಚೆಟ್ಟಿ ಬಿರುಸಿನ ಹೊಡೆತಕ್ಕೆ ಮುಂದಾದರು. ಈ ವೇಳೆ ಕ್ರಿಸ್ ನಿಂದ ಚೆಟ್ಟಿ ಮುಂದೆ ಹೋಗಿದ್ದೆ ತಡ ಟೀಂ ಇಂಡಿಯಾದ ಕೀಪರ್ ತಾನಿಯಾ ಭಾಟಿಯಾ ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿದರು.
ತಾನಿಯಾ ಒಂದೇ ಪಂದ್ಯದಲ್ಲಿ ಒಂದಲ್ಲ ಎರಡೆರಡು ಸ್ಟಂಪ್ ಔಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಚೆಟ್ಟಿ ಅವರನ್ನು ಮೊದಲು ಸ್ಟಂಪ್ ಔಟ್ ಗೆ ಕೆಡವಿದರೆ ಡು ಪ್ರೇಝ್ ನಂತರ ಸ್ಟಂಪ್ ಔಟ್ ಗೆ ಬೀಳಿಸಿದರು.