ಕ್ರಿಕೆಟ್

ಇಂಜಮಾಮ್-ಉಲ್-ಹಕ್, ರಿಕಿ ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ!

Srinivas Rao BV

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿಜೀವನದ 26ನೇ ಶತಕ ಸಿಡಿಸಿದರು. ಆಮೂಲಕ ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್(25 ಶತಕ) ಅವರ ದಾಖಲೆಯನ್ನು ಹಿಂದಿಕ್ಕಿದರು. 

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ 183 ಎಸೆತಗಳಲ್ಲಿ 16 ಬೌಂಡರಿಯೊಂದಿಗೆ 104 ರನ್ ಗಳಿಸಿ ವೃತ್ತಿ ಜೀವನದ 26 ಟೆಸ್ಟ್ ಶತಕ ಪೂರೈಸಿದರು. ಜೊತೆಗೆ ಭಾರತ ತಂಡದ ನಾಯಕನಾಗಿ  ಕೊಹ್ಲಿ 19ನೇ ಶತಕ ಇದಾಯಿತು. 26ನೇ ಶತಕ ಸಿಡಿಸಲು ಕೊಹ್ಲಿ 81  ಪಂದ್ಯಗಳ 138 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.  ಆದರೆ, 25ನೇ ಸಿಡಿಸಲು  ಇಂಜಮಾಮ್ ಅವರು  125 ಪಂದ್ಯಗಳ 200 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. 

2014ರಲ್ಲಿ ಭಾರತ  ತಂಡದ ನಾಯಕತ್ವವನ್ನು ವಿರಾಟ್ ವಹಿಸಿಕೊಂಡಿದ್ದರು. ನಾಯಕನಾಗಿ 40 ಶತಕ ಸಿಡಿಸಿರುವ  ಭಾರತದ ಆಟಗಾರ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಹ್ಲಿ ಭಾಜನರಾಗಿದ್ದಾರೆ.  ನಾಯಕನಾಗಿ ಅತಿಹೆಚ್ಚು ಶತಕ ಸಿಡಿಸಿರುವ ವಿಶ್ವದ  ಅಗ್ರ ಕ್ರಮಾಂಕದಲ್ಲಿ  ಆಸ್ಟ್ರೇಲಿಯಾ ನಾಯಕ  ರಿಕಿ ಪಾಂಟಿಂಗ್ ಇದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್  (51) ಇದ್ದಾರೆ. ನಂತರ ರಾಹುಲ್ ದ್ರಾವಿಡ್ (36) ಹಾಗು ಸುನಿಲ್ ಗವಾಸ್ಕರ್ (34) ಇದ್ದಾರೆ .

SCROLL FOR NEXT