ಕ್ರಿಕೆಟ್

ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಮುಂಬೈ ಕಿರಿಯ ಬ್ಯಾಟ್ಸ್‌‌ಮನ್ ಜೈಸ್ವಾಲ್

Vishwanath S

ಬೆಂಗಳೂರು: ಮುಂಬೈ ತಂಡದ ತರುಣ ಯಶಸ್ವಿ ಜೈಸ್ವಾಲ್ ಅವರು ಲಿಸ್ಟ್‌ ‘ಎ’ನಲ್ಲಿ ದ್ವಿಶತಕ ಸಿಡಿಸಿದ ಅತಿ ಕಿರಿಯ ಬ್ಯಾಟ್ಸ್‌‌ಮನ್ ಎಂಬ ದಾಖಲೆಯನ್ನು ಬುಧವಾರ ನಿರ್ಮಿಸಿದರು. 

ಇವರ ದ್ವಿಶತಕದ ನೆರವಿನಿಂದ ಮುಂಬೈ ತಂಡ 39 ರನ್‌ಗಳಿಂದ ಜಯ ಸಾಧಿಸಿದ್ದು, ಕ್ವಾರ್ಟರ್ ಪೈನಲ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. 

ಪ್ರಸಕ್ತ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಗೆ ಚೊಚ್ಚಲ ಪ್ರವೇಶ ಮಾಡಿರುವ 17ರ ಪ್ರಾಯದ ಯಶಸ್ವಿ ಜೈಸ್ವಾಲ್ ಅವರು ಬೆಂಗಳೂರು ಹೊರವಲಯದ ಆಲೂರು ಕೆಎಸ್‌ಸಿಎ 2ನೇ ಅಂಗಳದಲ್ಲಿ ಜಾರ್ಖಂಡ್ ವಿರುದ್ಧ ಈ ಸಾಧನೆ ಮಾಡಿದರು. 

154 ಎಸೆತಗಳನ್ನು ಎದುರಿಸಿದ ಅವರು 12 ಸಿಕ್ಸರ್ ಹಾಗೂ 17 ಬೌಂಡರಿಯೊಂದಿಗೆ 203 ರನ್ ಗಳಿಸಿದರು. ಆ ಮೂಲಕ ದ್ವಿಶತಕ ಸಿಡಿಸಿದ ಕಿರಿಯ ಆಟಗಾರ ಪಟ್ಟಿಗೆ ಯಶಸ್ವಿ ಜೈಸ್ವಾಲ್ ಸೇರ್ಪಡೆಯಾದರು. 
ಪ್ರಸಕ್ತ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಅವರು ಗೋವಾ ವಿರುದ್ಧ ಅಜೇಯ 212 ರನ್ ಗಳಿಸಿದ್ದರು. ಯಶಸ್ವಿ ಜೈಸ್ವಾಲ್ ಜತೆಗೆ ಮುಂಬೈ ಪರ ಆದಿತ್ಯ ತಾರೆ 78 ರನ್ ಸಿಡಿಸಿದ್ದರು.

SCROLL FOR NEXT