ಏಡೆನ್ ಮಾರ್ಕ್ರಮ್ 
ಕ್ರಿಕೆಟ್

3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಫ್ರಿಕಾಗೆ ಗಾಯದ ಮತ್ತೊಂದು ಬರೆ, ಆರಂಭಿಕ ಬ್ಯಾಟ್ಸ್‌‌ಮನ್ ಔಟ್!

ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟ್ಸ್‌‌ಮನ್ ಏಡೆನ್ ಮರ್ಕರಮ್ ಅವರು ಗಾಯದಿಂದಾಗಿ ಭಾರತದ ವಿರುದ್ಧ ರಾಂಚಿಯಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ರಾಂಚಿ: ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟ್ಸ್‌‌ಮನ್ ಏಡೆನ್ ಮರ್ಕರಮ್ ಅವರು ಗಾಯದಿಂದಾಗಿ ಭಾರತದ ವಿರುದ್ಧ ರಾಂಚಿಯಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಕಳೆದ ಎರಡು ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿರುವ ಏಡೆನ್ ಮರ್ಕರಮ್ ಅವರು ನಿರಾಸೆಗೆ ಒಳಗಾಗಿದ್ದರು. ಅಲ್ಲದೇ, ಪುಣೆ ಪಂದ್ಯದ ವೇಳೆ ಡ್ರೆಸ್ಸಿಂಗ್  ಕೊಠಡಿಯಲ್ಲಿ ಅವರ ವೈಫಲ್ಯದ ಬಗ್ಗೆ ಅಸಮಾಧಾನವಿತ್ತು. ಇದರ ನಡುವೆ ಅವರ ಮುಷ್ಟಿ ಗೆ ಗಾಯವಾಗಿದ್ದು, ಶನಿವಾರ ರಾಂಚಿನಲ್ಲಿ ನಡೆಯುವ ಪಂದ್ಯದಿಂದ ಮರ್ಕರಮ್ ದೂರ ಉಳಿಯಲಿದ್ದಾರೆ.

ಮರ್ಕರಮ್ ಅವರ ಸ್ಥಾನಕ್ಕೆ ಬೇರೆ ಆಟಗಾರನ ಹೆಸರನ್ನು ದಕ್ಷಿಣ ಆಫ್ರಿಕಾ ಗುರುತಿಸಲಿಲ್ಲ. ಏಡೆನ್ ಮರ್ಕರಮ್ ಅವರ  ಮುಷ್ಟಿಗೆ ಗಾಯವಾಗಿದ್ದು, ಅವರು ತವರಿಗೆ ಮರಳಿದ ಬಳಿಕ ಅವರು ವಿಶೇಷ ತಜ್ಞರನ್ನು ಭೇಟಿಯಾಗಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ವೈದ್ಯ ಹಾಶೇಂದ್ರ ರಾಮ್‌ಜೀ ಮಾಹಿತಿ ನೀಡಿದ್ದಾರೆ.

ಮರ್ಕರಮ್ ಅವರ ಮುಷ್ಟಿಯನ್ನು ಸಿಟಿ ಸ್ಕ್ಯಾನ್ ಮಾಡಲಾಗಿದೆ. ಅವರ ಮುಷ್ಟಿ ಮೂಳೆಗೆ ಬಲವಾಗಿ ಹೊಡೆತ ಬಿದ್ದಿರುವುದು ವರದಿ ಧೃಡೀಕರಿಸಿದೆ. ಹಾಗಾಗಿ, ಅವರನ್ನು ರಾಂಚಿಯಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆೆ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ.

ಏಡೆನ್ ಮರ್ಕರಮ್ ಅವರು ಕಳೆದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾಾರೆ. ಗುರುವಾರ ಬೆಳಗ್ಗೆ ಅವರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸ್ಪಿನ್ನರ್ ಕೇಶವ್ ಮಹರಾಜ್ ಕೂಡ ಭುಜದಲ್ಲಿ ನೋವು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರು ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾ ತಂಡ 0-2 ಅಂತರದಲ್ಲಿ ಭಾರತದ ವಿರುದ್ಧ ಟೆಸ್ಟ್‌ ಸರಣಿ ಬಿಟ್ಟುಕೊಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT