ಕ್ರಿಕೆಟ್

ಹೆಟ್ಮೇರ್ ದಾಖಲೆ ಮುರಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ!

Raghavendra Adiga

ರಾಂಚಿ:  ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದಾರೆ.

ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಸಾಧನೆಗೆ ರೋಹಿತ್ ಶರ್ಮಾ ಶನಿವಾರ ಭಾಜನರಾಗಿದ್ದಾರೆ. ಆ ಮೂಲಕ ವೆಸ್ಟ್ ಇಂಡೀಸ್ ತಂಡದ ಶಿಮ್ರಾನ್ ಹೆಟ್ಮೇರ್ ಅವರ ದಾಖಲೆಯನ್ನು ಮುರಿದರು. 

ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಹಿಟ್‍ಮನ್ ಈ ದಾಖಲೆ ಮಾಡಿದರು. ಒಟ್ಟಾರೆ, ಈ ಸರಣಿಯಲ್ಲಿ ರೋಹಿತ್ ಶರ್ಮಾ 16 ಸಿಕ್ಸರ್ ಸಿಡಿಸಿದ್ದಾರೆ. ಆ ಮೂಲಕ 2018/19ನೇ ಸಾಲಿನಲ್ಲಿ ಬಾಂಗ್ಲಾದೇಶ ವಿರುದ್ಧ ಶಿಮ್ರಾನ್ ಹೆಟ್ಮೇರ್ ಅವರು 15 ಸಿಕ್ಸರ್ ಸಿಡಿಸಿದ್ದರು. ಇದೀಗ ಅವರ ದಾಖಲೆಯನ್ನು ರೋಹಿತ್ ಪುಡಿ-ಪುಡಿ ಮಾಡಿದ್ದಾರೆ.

ಹೆಟ್ಮರ್‍ಗೂ ಮುನ್ನ ಈ ದಾಖಲೆ ಭಾರತದ ಸ್ಪಿನ್ನರ್ ಹರಭಜನ್ ಸಿಂಗ್ ಅವರ ಹೆಸರಿನಲ್ಲಿತ್ತು. 2010/11ನೇ ಆವೃತ್ತಿಯಲ್ಲಿ ಹರಭಜನ್ ಸಿಂಗ್ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 14 ಸಿಕ್ಸರ್ ಸಿಡಿಸಿ ಈ ಸಾಧನೆ ಮಾಡಿದ್ದರು. 

ಒಂದೇ ಸರಣಿಯಲ್ಲಿ ಆರಂಭಿಕನಾಗಿ ಅತಿ ಹೆಚ್ಚು ಶತಕಗಳು ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್ ಮನ್ ಎಂಬ ದಾಖಲೆ ಮಾಡಿದರು. ಅಗ್ರ ಸ್ಥಾನದಲ್ಲಿ ಸುನೀಲ್ ಗವಾಸ್ಕರ್ ಇದ್ದಾರೆ.

SCROLL FOR NEXT