ಕ್ರಿಕೆಟ್

ಬಾಂಗ್ಲಾ-ಟೀಂ ಇಂಡಿಯಾ ನೈಟ್ ಐತಿಹಾಸಿಕ ಟೆಸ್ಟ್: ಕೇವಲ 50 ರೂ.ಗೆ ಪಂದ್ಯದ ಟಿಕೆಟ್!

Vishwanath S

ಕೋಲ್ಕತ್ತಾ: ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ನವೆಂಬರ್ 22ರಂದು ಆಡನ್ ಗಾರ್ಡನ್ ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ 50 ರುಪಾಯಿಗೆ ಟಿಕೆಟ್ ದರ ಫಿಕ್ಸ್ ಮಾಡಲಾಗಿದೆ. 

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ಈ ಯೋಜನೆಗೆ ಸಿಎಬಿ ಕೂಡ ಕೈಜೋಡಿಸಿದ್ದು ಪಂದ್ಯದ ಟಿಕೆಟ್ ದರವನ್ನು 50, 100 ಹಾಗೂ 150 ರುಪಾಯಿಗಳನ್ನು ನಿಗದಿ ಮಾಡಿದೆ. 

ಮಧ್ಯಾಹ್ನ 2.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಇನ್ನು ಈಡನ್ ಗಾರ್ಡನನಲ್ಲಿ ಸುಮಾರು 68,000 ಆಸನ ವ್ಯವಸ್ಥೆಗಳಿದ್ದು ಕ್ರಿಕೆಟ್ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಕರೆತರುವ ಪ್ರಯತ್ನಗಳು ನಡೆದಿವೆ. 

SCROLL FOR NEXT