ಸಂಗ್ರಹ ಚಿತ್ರ 
ಕ್ರಿಕೆಟ್

ಧೋನಿ ಅಲಭ್ಯ: ಡಿಆರ್‌ಎಸ್ ತೆಗೆದುಕೊಂಡು ಕೈ ಸುಟ್ಟಿಕೊಂಡ ಕೊಹ್ಲಿ, ಆ ಒಂದು ಎಡವಟ್ಟು, ವಿಡಿಯೋ ವೈರಲ್!

ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬೇಡದ ಡಿಆರ್‌ಎಸ್ ತೆಗೆದುಕೊಂಡು ಕೈ ಸುಟ್ಟಿಕೊಂಡಿದ್ದಾರೆ. ಈ ನಿರ್ಣಯದಿಂದ ಮತ್ತೊಂದು ಸುವರ್ಣವಕಾಶವನ್ನು ಕಳೆದುಕೊಂಡು ಕೊನೆಗೆ ಪಂದ್ಯವನ್ನೇ ಸೋಲುವಂತಾಯಿತು.

ಬೆಂಗಳೂರು: ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬೇಡದ ಡಿಆರ್‌ಎಸ್ ತೆಗೆದುಕೊಂಡು ಕೈ ಸುಟ್ಟಿಕೊಂಡಿದ್ದಾರೆ. ಈ ನಿರ್ಣಯದಿಂದ ಮತ್ತೊಂದು ಸುವರ್ಣವಕಾಶವನ್ನು ಕಳೆದುಕೊಂಡು ಕೊನೆಗೆ ಪಂದ್ಯವನ್ನೇ ಸೋಲುವಂತಾಯಿತು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 9 ವಿಕೆಟ್ ಗಳಿಂದ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ದೀಪಕ್ ಚಹಾರ್ ಮಾತು ಕೇಳಿ ಕೊಹ್ಲಿ ಮಾಡಿದ ಆ ಒಂದು ಎಡವಟ್ಟು ಕೊನೆಗೆ ಪಂದ್ಯ ಕೈಚೆಲ್ಲುವಂತಾಯಿತು.

ದೀಪಕ್ ಚಹಾರ್ ಎಸೆತ ಹೆಂಡ್ರಿಕ್ ಪ್ಯಾಡ್ ಗೆ ಬಿದ್ದಿದ್ದು ಈ ವೇಳೆ ಚಹಾರ್ ಅಪೀಲ್ ಮಾಡಿದ್ದು ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆದರೆ ಚಹಾರ್ ಬಿಡದೆ ಇದು ಖಂಡಿತವಾಗಿಯೂ ಔಟ್ ಇದೆ ಎಂದು ಕೊಹ್ಲಿಯ ಮನವೊಲಿಸಿದರು. ಇನ್ನು ಅರ್ಧ ಮನಸ್ಸಿನಲ್ಲೇ ಕೊಹ್ಲಿ ಡಿಆರ್‌ಎಸ್ ಗೆ ಮನವಿ ಮಾಡಿದರು. 

ದೃಶ್ಯಗಳನ್ನು ಪರಿಶೀಲಿಸಿದ ಮೂರನೇ ಅಂಪೈರ್ ಇದು ನಾಟೌಟ್ ಎಂದು ತೀರ್ಪು ನೀಡಿದರು. ಇದರಿಂದ ಅಂಪೈರ್ ಮುಖ ಮುಚ್ಚಿಕೊಂಡಿದರು. ಇದಾದ ನಂತರದ ಓವರ್ ನಲ್ಲೇ ವಾಷಿಂಗ್ಟನ್ ಸುಂದರ್ ಕ್ವಿಂಟನ್ ಡಿ ಕಾಕ್ ರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಮೊದಲೇ ಡಿಆರ್‌ಎಸ್ ತೆಗೆದುಕೊಂಡಿದ್ದರಿಂದ ಅವಕಾಶ ಕಳೆದುಕೊಂಡಿದ್ದರು. ನಂತರ ರಿಪ್ಲೇಲ್ ನೋಡಿದಾಗ ಎಲ್ಬಿಡಬ್ಲ್ಯೂ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT